ಮಾಲೂರು : ಸರ್ಕಾರ ದಿನ ಪತ್ರಿಕೆ ವಿತರಿಸುವ ಕಾರ್ಮಿಕರಿಗೆ ಅಪಘಾತ ಪರಿಹಾರ ಹಾಗೂ ವೈಧ್ಯಕೀಯ ಸೌಲಭ್ಯ ಯೋಜನೆಯನ್ನು ಅನುಷ್ಠಾನ ಗೊಳಿ
ಸಿದ್ದು ಪತ್ರಿಕೆ ವಿತರರಕರು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಕಾರ್ಮಿಕ ನಿರೀಕ್ಷಕ ರೇಣುಕಾ ಪ್ರಸನ್ನ ತಿಳಿಸಿದ್ದಾರೆ.
ಪಟ್ಟಣದ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಸುದ್ದಿಗಾರರಿಗೆ ಕಾರ್ಮಿಕ ಇಲಾಖೆ ವಿವಿಧ ಯೋಜನೆ ಮತ್ತು ಸೌಲಭ್ಯಗಳ ಬಗ್ಗೆ ವಿವರಿಸಿ ಮಾತನಾಡಿ, ಮಳೆಯನ್ನದೇ, ಚಳಿಯನ್ನದೇ ಪ್ರತಿದಿನ ಮುಂಜಾನೆ ಸಾರ್ವಜನಿಕರ ಮನೆ ಬಾಗಿಲಿಗೆ ದಿನ ಪತ್ರಿಕೆಗಳನ್ನು ವಿತರಣೆ ಮಾಡುವ ದಿನಪತ್ರಿಕೆ ವಿತರಕ ಕಾರ್ಮಿಕರು ಅರಕಾಲಿಕ ವೃತ್ತಿ ನಿರ್ವಹಿಸುತ್ತಿದ್ದು, ಇವರು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿದ್ದು ಇವರು ಕಾರ್ಮಿಕ ಕಾನೂನುಗಳಡಿ ನಿಗದಿಪಡಿಸಿರುವ ಸಾಮಾಜಿಕ ಭದ್ರತಾ ಸೌಲಭ್ಯ ಗಳಿಂದ ವಂಚಿತರಾಗಿದ್ದಾರೆ.
ಇಂತಹ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2008ರಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯಿದೆಯನ್ನು ರೂಪಿ ಸಿತು.ಈ ಕಾಯಿದೆಗೆ 2006ರಲ್ಲಿ ರಾಜ್ಯ ಸರ್ಕಾರವು ನಿಯಮಗಳನ್ನು ಅಸಂಘಟತ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಕಾರ್ಯ ರೂಪಗೊಳಿಸಿ ದಿನ ಪತ್ರಿಕೆ ವಿತರಿಸುವ ಕಾರ್ಮಿಕರು ಆಕಸ್ಮಿಕವಾಗಿ ಅಪಘಾತದಿಂದ ಮರಣ ಹೊಂದಿದರೆ.
2 ಲಕ್ಷ, ಸಂಪೂರ್ಣ ಶಾಸ್ವತ ದುರ್ಬಲತೆ(ಶೇಕಡ ವಾರು ದುರ್ಬಲತೆ ಆಧಾರದಂತೆ )ಹೊಂದಿದಲ್ಲಿ 2,ಲಕ್ಷ ಹಾಗೂ ಆಸ್ಪತ್ರೆ ವೆಚ್ಚ ಮರು ಪಾವತಿ ರೂ 1ಲಕ್ಷ ಸಂಕಷ್ಟಕ್ಕೆ ನೋoದಾಯಿತ ದಿನ ಪತ್ರಿಕೆ ವಿತರಕ ಕಾರ್ಮಿಕರಿಗೆ ಸರ್ಕಾರ ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಚಿಕಿತ್ಸೆಸೌಲಭ್ಯ ಒದಗಿಸುವ ಮೂಲಕ ಸಂಕಷ್ಟ ದಿಂದ ಮುಕ್ತಿಗೊಳಿಸಬಹುದಾ ಗಿದೆ 16ರಿಂದ 59 ವರ್ಷಗಳ ಒಳಗಿನ ಅರ್ಹ ದಿನಪತ್ರಿಕೆ ವಿತರಕರು ತಾಲ್ಲೂಕು ಕಾರ್ಮಿಕ ಇಲಾಖೆ ಕಚೇರಿಗೆ ಭೇಟಿ ನೀಡಿ ಸಂಬಂಧಪಟ್ಟ ದಾಖಲಾತಿಗಳನ್ನು ಕೊಟ್ಟು ಕರ್ನಾಟಕ ರಾಜ್ಯ ದಿನ ಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ ಯಡಿ ನೊಂದಣಿ ಮಾಡಿ ಕೊಳ್ಳುವಂತೆ ತಿಳಿಸಿದ್ದಾರೆ.