ಬೆಂಗಳೂರು: ಮುದ್ರಿಕಾ ಪೌಂಡೇಶನ್ ಫಾರ್ ಇಂಡಿಯನ್ ಫಾರ್ ಪಾರ್ಮಿಂಗ್ ಆರ್ಟ್ಸ್ ಆಶ್ರಯದಲ್ಲಿ ದೀಪಿಕಾ ರಂಗನಾಥ್ ಅವರ ಭರತ ನಾಟ್ಯ ರಂಗಪ್ರವೇಶ ಕಾರ್ಯಕ್ರಮ ಬೆಂಗಳೂರಿನ ತೆಲುಗು ವಿಜ್ಞಾನ ಸಮಿತಿಯ ಶ್ರೀ ಕೃಷ್ಣ ದೇವರಾಯ ಸಭಾಂಗಣದಲ್ಲಿ ನಡೆಯಿತು.
ಭರತ ನಾಟ್ಯ ಗುರು ಮಿನಲ್ ಪ್ರಭು ಅವರ ಗರಡಿಯಲ್ಲಿ ಭರತನಾಟ್ಯ ಅಭ್ಯಾಸ ನಡೆಸಿರುವ ದೀಪಿಕಾ ರಂಗನಾಥ್ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ಜ್ಯೋತಿ ರಘರಾಮ್, ಖ್ಯಾತೆ ನೃತ್ಯಗಾರ್ತಿ ಮಯೂರಿ ಉಪಧ್ಯಾಯ, ನಾಟ್ಯ ಭಾರತಿ ಟ್ರಸ್ಟ್ ನ ವಿದ್ವಾನ್ ನಾಗೇಶ್ ಮತ್ತು ವಿಧೂಷಿ ರಂಜಿತ್ ನಾಗೇಶ್ ದೀಪಿಕಾ ರಂಗನಾಥ್ ಅವರ ಭರತ ನಾಟ್ಯ ಕಲಾವಂತಿಕೆ ಕಂಡು ಪ್ರಶಂಸೆ ವ್ಯಕ್ತಪಡಿಸಿದರು.
ಜ್ಯೋತಿ ರಂಗನಾಥ್ ಹಾಗೂ ಭಾಗ್ಯ ಲಕ್ಷ್ಮೀ ಅವರ ಪುತ್ರಿಯಾದ ದೀಪಿಕಾ ರಂಗನಾಥ್ ಕಳೆದ 11ವರ್ಷದಿಂದ ಕರ್ನಾಟಕ ಕಲಾ ಶ್ರೀ ಗುರು ಮಿನಲ್ ಪ್ರಭು ಅವರ ಬಳಿ ಭರತ ನಾಟ್ಯ ಅಭ್ಯಾಸ ನಡೆಸಿದ್ದು, ಆರನೇ ವರ್ಷದಿಂದಲೇ ಭರತ ನಾಟ್ಯ ಅಭ್ಯಾಸ ನಡೆಸಿದ್ದಾರೆ.ಪ್ರಸ್ತುತ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಇಂಜಿನಿಯರಿಂಗ್ ಉತ್ತಮ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಾರೆ,ವಿವಿಧ ರಾಜ್ಯಗಳ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಭರತ ನಾಟ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡು ಪ್ರಶಸ್ತಿ ಗಳಿಸಿದ್ದಾರೆ,24ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೀಪಿಕಾ ತಂಡ ಚಿನ್ನದ ಪದಕ ಗಳಿಸಿದೆ.