ನವದೆಹಲಿ: ರಾಜಧಾನಿ ದೆಹಲಿಯಲ್ಲಿ ದಟ್ಟವಾದ ಮಂಜಿನ ಹೊದಿಕೆ ಆವರಿಸಿದ್ದು, ವಿಮಾನ ಮತ್ತು ರೈಲು ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ.
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 100 ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ ಮತ್ತು 26 ರೈಲುಗಳು ತಡವಾಗಿ ಚಲಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಟ್ಟ ಮಂಜಿನಿಂದಾಗಿ, ವಿಮಾನ ನಿರ್ಗಮನದ ಮೇಲೆ ಪರಿಣಾಮ ಬೀರಿದೆ, ವಿಮಾನಗಳು ದೆಹಲಿ ವಿಮಾನ ನಿಲ್ದಾಣದಿಂದ ಇಳಿಯಲು ಮತ್ತು ನಿರ್ಗಮಿಸಲು ಸಾಧ್ಯವಾಗುತ್ತದೆ. ನೂತನ ವೇಳಾಪಟ್ಟಿಗೆ ಮಾಹಿತಿಗಾಗಿ ಪ್ರಯಾಣಿಕರು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ನಸುಕಿನ ಜಾವ 4.30ರಿಂದ ಪಾಲಂ ಮೇಲೆ ಶೂನ್ಯ ಗೋಚರತೆ ಇದ್ದು, ಗಂಟೆಗೆ 6-8 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಸಫ್ದರ್ಜಂಗ್ನಲ್ಲಿ, 5.30ರಿಂದ ಶಾಂತ ಗಾಳಿಯೊಂದಿಗೆ ದಟ್ಟವಾದ ಮಂಜಿನಲ್ಲಿ ಗೋಚರತೆ ಕನಿಷ್ಠ 50 ಮೀಟರ್ಗೆ ಸೀಮಿತವಾಗಿದೆ ಎಂದು ಹೇಳಿದೆ.
ದೆಹಲಿಯಲ್ಲಿ ಕನಿಷ್ಠ ತಾಪಮಾನ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 0.9 ಡಿಗ್ರಿ ಕಡಿಮೆಯಾಗಿದೆ, ಆದರೆ ಗಾಳಿಯ ಗುಣಮಟ್ಟ ತೀವ್ರ ವರ್ಗದಲ್ಲಿ ದಾಖಲಾಗಿದೆ. ಕನಿಷ್ಠ ತಾಪಮಾನ 6 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಗರಿಷ್ಠ ತಾಪಮಾನವು ತುಂಬಾ ದಟ್ಟವಾದ ಮಂಜು ಜೊತೆಗೆ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ‘ತೀವ್ರ ಇಳಿಕೆ’ ವರ್ಗಕ್ಕೆ ಇಳಿದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ದೆಹಲಿಯಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ವಾಯು ಗುಣಮಟ್ಟ ‘ತೀವ್ರ’ ಮಟ್ಟಕ್ಕೆ ಇಳಿದಿದೆ.
ಶೂನ್ಯ ಮತ್ತು 50 ರ ನಡುವಿನ ವಾಯು ಗುಣಮಟ್ಟವನ್ನು “ಉತ್ತಮ”, 51 ಮತ್ತು 100 “ತೃಪ್ತಿದಾಯಕ”, 101 ಮತ್ತು 200 “ಮಧ್ಯಮ”, 201 ಮತ್ತು 300 “ಕಳಪೆ”, 301 ಮತ್ತು 400 “ತುಂಬಾ ಕಳಪೆ” ಮತ್ತು 401 ಮತ್ತು 500 “ತೀವ್ರ” ಎಂದು ಪರಿಗಣಿಸಲಾಗಿದೆ.
ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿ (DUSIB) ನಿರಾಶ್ರಿತರಿಗೆ ಆಶ್ರಯ ನೀಡಲು 235 ಪಗೋಡಾ ಟೆಂಟ್ಗಳನ್ನು ಸ್ಥಾಪಿಸಲಾಗಿದೆ. ಏಮ್ಸ್, ಲೋಧಿ ರಸ್ತೆ ಮತ್ತು ನಿಜಾಮುದ್ದೀನ್ ಫ್ಲೈಓವರ್ ಸೇರಿದಂತೆ ರಾಷ್ಟ್ರ ರಾಜಧಾನಿಯ ಹಲವಾರು ಪ್ರದೇಶಗಳಲ್ಲಿ ರಾತ್ರಿ ಆಶ್ರಯಗಳನ್ನು ಸ್ಥಾಪಿಸಲಾಗಿದೆ.