ದೆಹಲಿ: ಕರ್ನಾಟಕ ರಾಜ್ಯದ ಬಿಜೆಪಿಯಲ್ಲಿ ಹಿರಿಯರಾಗಿರುವ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಅವರನ್ನು ಗುರುತಿಸಿಕೊಂಡಿರುವ ಪ್ರಮುಖರ ತಂಡ ಇಂದು ದೆಹಲಿಯಲ್ಲಿ ಬೀಡುಬಿಟ್ಟಿದೆ.ಮೊನ್ನೆಯಷ್ಟೇ ವಕ್ಫ್ ಅಭಿಯಾನದ ವರದಿಯೊಂದಿಗೆ ದೆಹಲಿಗೆ ತೆರಳಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಿನ್ನೆ ಪಕ್ಷದ ಕೇಂದ್ರ ಶಿಸ್ತು ಸಮಿತಿಯಿಂದ ನೋಟಿಸ್ ಜಾರಿ ಮಾಡಲಾಗಿತ್ತು.
ಬಸವನಗೌಡ ಪಾಟೀಲ್ ಯತ್ನಾಳ್ ಗೆ ನೋಟಿಸ್ ನೀಡಿದ ಬೆನ್ನಲ್ಲೆ ಅವರೊಂದಿಗೆ ಗುರುತಿಸಿಕೊಂಡು ಪಕ್ಷದ ಮುಖಂಡರು ನಿನ್ನೆ ದೆಹಲಿಗೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.ಶಾಸಕರಾದ ಯತ್ನಾಳ್, ರಮೇಶೇ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿ.ಪಿ. ಹರೀಶ್,ಅರವಿಂದ್ ಲಿಂಬಾವಳಿ, ಬಿ.ವಿ.ನಾಯ್ಕ್, ಸೇರಿ ಹಲವು ನಾಯಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಇಂದು ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗೆ ತಯಾರಿ ನಡೆಸಿದ್ದಾರೆ.
ಯಡಿಯೂರಪ್ಪ ಅವರ ಬಂಧು ಆಗಿರುವ ಮಾಜಿ ಆಪ್ತ ಎನ್ ಆರ್ ಸಂತೋಷ ಸಹ ಈ ಟೀಂ ನೊಂದಿಗೆ ಇದ್ದುಯತ್ನಾಳ್ ನೋಟಿಸ್ ವಿಚಾರ ಮತ್ತು ಸದ್ಯದ ರಾಜ್ಯ ಬಿಜೆಪಿಯ ವಿಚಾರ ಹೈಕಮಾಂಡ್ ಗೆ ತಿಳಿಸಲಿರೊ ನಾಯಕರು ನಿನ್ನೆ ತಡರಾತ್ರಿಯೆ ಎಲ್ಲಾ ನಾಯಕರಿಂದ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.