ಆಶು ಮಲಿಕ್, ವಿನಯ್ ಅವರ ಮನಮೋಹಕ ಆಟದ ನೆರವಿನಿಂದ ದಬಾಂಗ್ ದೆಹಲಿ ಕೆ.ಸಿ ೩೩-೩೦ ರಿಂದ ಬಂಗಾಳ ವಾರಿಯರ್ಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು. ಈ ಮೂಲಕ ದೆಹಲಿ ಆಡಿದ ೮ ಪಂದ್ಯಗಳಲ್ಲಿ ೩ ಜಯ, ೫ ಸೋಲು ಕಂಡಿದ್ದು ೧೯ ಅಂಕಗಳನ್ನು ಕಲೆ ಹಾಕಿದೆ.
ಬಂಗಾಳ ವಾರಿಯರ್ಸ್ ಮೂರನೇ ಗೆಲುವಿನ ಕನಸು ನುಚ್ಚು ನೂರಾಯಿತು.
ದಬಾಂಗ್ ದೆಹಲಿ ಕೆ.ಸಿ ಆಡಿದ ಮೊದಲಾವಧಿಯ ಆಟದಲ್ಲಿ ಉತ್ತಮ ಮುನ್ನಡೆ ಸಾಧಿಸಿತು. ಬಂಗಾಳ ವಾರಿಯರ್ಸ್ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲವಾಯಿತು. ಈ ವೇಳೆ ದಬಾಂಗ್ ದೆಹಲಿ ಕೆಸಿ ೧೨ ರೈಡಿಂಗ್ ಪಾಯಿಂಟ್ ಕಲೆ ಹಾಕಿದರೆ, ೩ ಟ್ಯಾಕಲ್ ಪಾಯಿಂಟ್ ಬುಟ್ಟಿಗೆ ಹಾಕಿಕೊಂಡಿತು. ಅಲ್ಲದೆ ಒಂದು ಬಾರಿ ಎದುರಾಳಿ ತಂಡದ ಅಂಗಳ ಖಾಲಿ ಮಾಡಿ ಬೋನಸ್ ಅಂಕ ಕಲೆ ಹಾಕಿತು.
ದಬಾಂಗ್ ಅಬ್ಬರ: ಎರಡನೇ ಅವಧಿಯ ಆಟದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನೀಡಿದವು. ಅಲ್ಲದೆ ಸುಲಭವಾಗಿ ಅಂಕಗಳನ್ನು ನೀಡಲಿಲ್ಲ. ಈ ಅವಧಿಯಲ್ಲಿ ದಬಾಂಗ್ ೧೪- ೯ ಅಂಕಗಳಿAದ ಮುನ್ನಡೆ ಸಾಧಿಸಿತು. ಅಲ್ಲದೆ ಸುಲಭವಾಗಿ ಪಂದ್ಯವನ್ನು ಗೆದ್ದು ಪೂರ್ಣ ಅಂಕವನ್ನು ಮಡಿಲಿಗೆ ಹಾಕಿಕೊಂಡಿತು.
ದೆಹಲಿ ಎದುರು ಡುಬ್ಕಿ ಹೊಡೆದ ವಾರಿಯರ್ಸ್
