ನವದೆಹಲಿ: ಉತ್ತರ ಪ್ರದೇಶದ ಸಾಹಿಬಾಬಾದ್ನಿಂದ ನ್ಯೂ ಅಶೋಕ್ ನಗರಕ್ಕೆ ದೆಹಲಿ-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಕಾರಿಡಾರ್ನ 13 ಕಿಮೀ ವಿಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದ್ದಾರೆ.
ನಂತರ ಸಾಹಿಬಾಬಾದ್ ನಿಲ್ದಾಣದಿಂದ ನ್ಯೂ ಅಶೋಕ್ ನಗರ ನಿಲ್ದಾಣದವರೆಗೆ ನಮೋ ಭಾರತ್ ರೈಲಿನಲ್ಲಿ ಮೋದಿ ಪ್ರಯಾಣಿಸಿದರು. ತಮ್ಮ ಪ್ರಯಾಣದ ವೇಳೆ ಪ್ರಧಾನಿಯವರು ಮಕ್ಕಳು ಸೇರಿದಂತೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.
ಆರ್ಆರ್ಟಿಎಸ್ನ ದೆಹಲಿ ವಿಭಾಗದ ಉದ್ಘಾಟನೆಯೊಂದಿಗೆ ನಮೋ ಭಾರತ್ ರೈಲುಗಳು ಈಗ ರಾಷ್ಟ್ರ ರಾಜಧಾನಿಗೆ ಆಗಮಿಸಿವೆ. ನ್ಯೂ ಅಶೋಕ್ ನಗರ ಮತ್ತು ಮೀರತ್ ಸೌತ್ ನಡುವಿನ 55-ಕಿಮೀ ಆರ್ ಆರ್ ಟಿಎಸ್ ಕಾರಿಡಾರ್ 11 ನಿಲ್ದಾಣಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪ್ರಯಾಣಿಕರ ಕಾರ್ಯಾಚರಣೆಗಳು ಸಂಜೆ 5 ರಿಂದ ಪ್ರಾರಂಭವಾ
ನ್ಯೂ ಅಶೋಕ್ ನಗರ ನಿಲ್ದಾಣದಿಂದ ಮೀರತ್ ಸೌತ್ ನಿಲ್ದಾಣಕ್ಕೆ ಸ್ಟ್ಯಾಂಡರ್ಡ್ ಕೋಚ್ಗೆ 150 ರೂಪಾಯಿ ಮತ್ತು ಪ್ರೀಮಿಯಂ ಕೋಚ್ಗೆ 225 ರೂಪಾಯಿಗಳಿದೆ.
ಪ್ರಧಾನಿಯವರು ಕಳೆದ ವರ್ಷ ಅಕ್ಟೋಬರ್ 20 ರಂದು ಸಾಹಿಬಾಬಾದ್ ಮತ್ತು ದುಹೈ ಡಿಪೋ ನಡುವಿನ 17-ಕಿಮೀ ಆದ್ಯತೆಯ ವಿಭಾಗವನ್ನು ಉದ್ಘಾಟಿಸಿದ್ದರು.
ಗುತ್ತವೆ ಮತ್ತು ರೈಲುಗಳು ಪ್ರತಿ 15 ನಿಮಿಷಗಳಿಗೊಮ್ಮೆ ಲಭ್ಯವಿರುತ್ತವೆ.