ಬೆಳಗಾವಿ: ರಾಜ್ಯದಲ್ಲಿನ ದೇವದಾಸಿ ಮಹಿಳೆಯರಿಗೆ ಕೂಡಾ ಗೃಹ ಲಕ್ಷ್ಮೀ ಯೋಜನೆಯ ನೆರವು ದೊರೆಯುತ್ತಿದ್ದು, ಸೌಲಭ್ಯ ದೊರೆಯದ ಬಗ್ಗೆ ಯಾವುದೇ ದೂರು ಸಲ್ಲಿಕೆಯಾದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಪ್ರಶ್ನೆ ಕೇಳಿದ್ರು.ಕೊಪ್ಪಳದಲ್ಲಿ ಸರಿಯಾಗಿ ದೇವದಾಸಿಯರಿಗೆ ಮಾಶಾಸನ ಸಿಗುತ್ತಿಲ್ಲ. ದೇವದಾಸಿಯರ ಸರ್ವೆ ಸರಿಯಾಗಿ ಆಗಿಲ್ಲ. ದೇವದಾಸಿಯರ ಮಾಶಾಸನ 5 ಸಾವಿರಕ್ಕೆ ಹೆಚ್ಚಳ ಮಾಡಬೇಕು.ಗೃಹಲಕ್ಷ್ಮಿ ಯೋಜನೆ ದೇವದಾಸಿಯರಿಗೆ ನೀಡಬೇಕು ಅಂತ ಒತ್ತಾಯ ಮಾಡಿದ್ರು.
ಇದಕ್ಕೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿ, ದೇವದಾಸಿಯರಿಗೆ ಸರಿಯಾಗಿ ಮಾಶಾಸನ ಡಿಬಿಟಿ ಮೂಲಕ ಹಾಕಲಾಗ್ತಿದೆ.ಎಲ್ಲೂ ಕೂಡಾ ಮಾಶಾಸನ ಸೋರಿಕೆ ಆಗ್ತಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿಯರ ಸರ್ವೆ ಸರಿಯಾಗಿ ಆಗಿಲ್ಲ ಅನ್ನೋ ಬಗ್ಗೆ ಮತ್ತೊಮ್ಮೆ ಸಮೀಕ್ಷೆ ಮಾಡುತ್ತೇವೆ ಎಂದರು.