ದೇವನಹಳ್ಳಿ : ಡಿಸೆಂಬರ್ 28ರಂದು ಮಧ್ಯಾಹ್ನ 1.30ರಿಂದ ದೇವನಹಳ್ಳಿ ಪಟ್ಟಣದ ಡಾ|| ಬಿ.ಆರ್. ಅಂಬೇಡ್ಕರ್ ಭವನದಲ್ಲಿ “ಜಗ್ಗಣ್ಣಕ್ಕ” ವಿಶೇಷ ರಸಮಂಜರಿ ಜಾನಪದ ಗಾಯನ ಕಾರ್ಯಕ್ರಮ ದೇವನಹಳ್ಳಿಯ ಬಯಪ ಅಧ್ಯಕ್ಷ ಶಾಂತಕುಮಾರ್ರವರ ಸಹಕಾರದೊಂದಿಗೆ ಆಯೋಜಿಸಲಾಗಿದೆ ಎಂದು ನಿರೂಪಕ ಗಾಯಕ, ಗೋನಾ ಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆಯುಷ್.ಟಿ.ವಿ ಸಹಬಾಗಿತ್ವದಲ್ಲಿ ಆಯೋಜಿಸಲಾಗಿರುವ ಈ ಜಗ್ಗಣ್ಣಕ್ಕ ಸಂಗೀತ ಸುಗ್ಗಿ ರಸಮಂಜರಿ ಜಾನಪದ ಗಾಯನ ಸಂಗೀತ ಕಾರ್ಯಕ್ರಮದಲ್ಲಿ 6ರಿಂದ 60ವರ್ಷ ವಯಸ್ಸಿನ ಎಲ್ಲಾ ಗಾಯಕ, ಗಾಯಕಿಯರು ಭಾಗವಹಿಸಬಹುದು, ಭಾಗವಹಿಸಲಿಚ್ಚಿಸುವ ಸ್ಪರ್ಧಾಳುಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು, ನೋಂದಾವಣೆ ಮಾಡಿಕೊಂಡಿರುವ ಕಲಾವಿದರಿಗೆ ಡಿಸೆಂಬರ್ 22ರಂದು ಐ.ಬಿ. ಮುಂದೆ ಇರುವ ದೇವನಹಳ್ಳಿ ಪತ್ರಿಕಾ ಭವನದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಧ್ವನಿಪರೀಕ್ಷೆ ಮಾಡಲಾಗುವುದು, ಅಂದು ಆಯ್ಕೆಯಾದವರು 28ರಂದು ನಡೆಯುವ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಬಹುದು ಎಂದು ತಿಳಿಸಿದರು.
ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣಭಾಗದ ಜಾನಪದ ಸಂಗೀತ ನಶಿಸುತ್ತಿರುವ ಉದ್ದೇಶದಿಂದ ಅದನ್ನು ಉಳಿಸಿ ಬೆಳೆಸುವದೃಷ್ಠಿಯಿಂದ ಆಯುಷ್ ಟಿ.ವಿ ಸಹಯೋಗ ದೊಂದಿಗೆ 62 ವಿವಿಧ ದೇಶಗಳಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗಿದ್ದು, ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಜಾನಪದ ರಸಮಂಜರಿ ಕಾರ್ಯಕ್ರಮ ಮಾಡಲಾಗುತ್ತಿದೆ ಕೋಲಾರ ಚಿಕ್ಕಬಳ್ಳಾಪುರದಲ್ಲಿ ಆಯೋಜನೆ ಮಾಡಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೇ ಪ್ರಥಮ ಬಾರಿ ದೇವನಹಳ್ಳಿಯಲ್ಲಿ ಆಯೋಜಿಸಲಾಗಿದೆ, ವಿದೇಶಗಳಲ್ಲಿ ಅಲ್ಲಿನ ಸಾಂಪ್ರದಾಯಿಕ ಸಂಗೀತಕ್ಕೆ ಬೆಲೆ ನೀಡುತ್ತಾರೆ ಆದರೆ ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಸಂಗೀತ ಬಿಟ್ಟು, ವಿದೇಶಿ ಸಂಗೀತಕ್ಕೆ ಮಾರು ಹೋಗುತ್ತಿದ್ದೇವೆ, ನಮ್ಮ ಸರ್ಕಾರಗಳು ಕೂಡ ನಮ್ಮ ಸಂಸ್ಕøತಿಯ ಜಾನಪದ ಉಳಿಸುವಲ್ಲಿ ವಿಫಲವಾಗಿವೆ, ನಾವು ಗ್ರಾಮೀಣ ಸೊಗಡಿನ ಜನಪದ ಸಂಗೀತ ಉಳಿಸುವ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಭಾಗವಹಿಸಲಿದ್ದು ವಿಶೇಷ ಆಕರ್ಷಣೆಯಾಗಿ ಮಿಮಿಕ್ರ ಗೋಪಿ ಸೇರಿದಂತೆ ಇತರೆ ಕಲಾವಿಧರು ಭಾಗವಹಿಸಲಿದ್ದಾರೆ, ಪ್ರವೇಶ ಪಾಸ್ ಇರುವವರಿಗೆ ಮಾತ್ರ ಒಳಗೆ ಪ್ರವೇಶ . ಹೆಚ್ಚಿನ ವಿವರಗಳಿಗೆ ಹಾಗೂ ನೋಂದಣೆ ಮಾಡಿಕೊಳ್ಳಲು 9663301655 ಗೆ ಕರೆ ಮಾಡಿ ತಮ್ಮ ಹೆಸರು ವಿಳಾಸ ನೀಡಿ. ಈ ಸಮಯದಲ್ಲಿ ನಿರ್ವಾಹಕ ಮಂಜುನಾಥ್, ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎನ್. ಕೃಷ್ಣಪ್ಪ ಉಪಸ್ಥಿತರಿದ್ದರು.