ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯತಿಗೆ ಕೇಂದ್ರ ಜಲ ಶಕ್ತಿ ಮಂತ್ರಾಲಯ ತಂಡ ಭೇಟಿ ನೀಡಿ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವಿವಿಧ ಕಾಮಗಾರಿಗಳ ಪರಿಶೀಲನೆ.ಜಲಜೀವನ್ ಮಿಷನ್ ಯೋಜನೆಯ ರಾಷ್ಟ್ರೀಯತಜ್ಞರಾದ ಪ್ರೊನೋಭಕುಮಾರ್ ತಾಲೂಕ್ಡ್ ಹಾಗೂ ವನಿತಾ ತಂಡವು ಗ್ರಾಪಂ ವ್ಯಾಪಿಯ ಪಂಡಿತಪುರ ಹಾಗೂ ದಿನ್ನೂರು ಗ್ರಾಮಕ್ಕೆ ಭೇಟಿ ನೀಡಿ,
ಗ್ರಾಮೀಣಾ ಕುಡಿಯುವ ನೀರು ಮತ್ತು ನೈರ್ಮಲ್ಯವಿಭಾಗದಡಿ ಮನೆ ಮನೆಗೆ ಗಂಗೆ(ಜೆ.ಜೆ.ಎಂ), ಕುಡಿಯುವ ನೀರಿನ ಘಟಕ, ವೈಯಕ್ತಿಕ ಶೌಚಾಲಯ, ಸಿಸ್ಟನ್, ಓವರ್ ಹೆಡ್ ಟ್ಯಾಂಕ್, ನೀರು ಕಾಲುವೆ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ವಿಕ್ಷಣೆ ಮಾಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಪಂ ಯೋಜನಾ ನಿರ್ದೇಶಕರಾದ ವಿಠ್ಠಲ್ ಕಾವ್ಳೆ, ಯೋಜನಾ ಸಹಾಯಕ ನಿರ್ದೇಶಕಿ ನಾಗಮಣಿ, ಆರ್.ಡಬ್ಲ್ಯೂ.ಎಸ್ ಕಾರ್ಯಪಾಲಕ ಅಭಿಯಂತರರಾದ ಶ್ರೀಕಾಂತ, ಸಹಾಯಕ ನಿರ್ದೇಶಕರಾದ ಅಮರನಾರಾಯಣಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಭರತ್, ಆರ್.ಡಬ್ಲ್ಯೂ.ಎಸ್ ತಾಂತ್ರಿಕ ಅಭಿಯಂತರರು, ನರೇಗಾ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.