ದೇವನಹಳ್ಳಿ: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದ ಸಾಮಾನ್ಯ ಕ್ಷೇತ್ರ ಮೀಸಲು ಸ್ಥಾನದಿಂದ ಹನುಮಪ್ಪ.ಬಿ.ಕೆ ಮತ್ತು ಮುನಿರಾಜು ಅವಿರೋಧ ಆಯ್ಕೆ ಮುನೇಗೌಡ .ಎಸ್ 63, ಮುನಿರಾಜು. ಸಿ 49, ರಾಜಣ್ಣ.ಸಿ. ಎಸ್ 74, ಮುನೇಗೌಡ.ಆರ್ 42, ಮುನಿರಾಜು.ವಿ 50, ಮಹಿಳಾ ಮೀಸಲು ಸ್ಥಾನದಿಂದ ಆರ್. ಆಶಾ ಮತ್ತು ಅನ್ನಪೂರ್ಣ ಎಸ್. ಬಿ ಅವಿರೋಧ ಆಯ್ಕೆ, ಹಿಂದುಳಿದ ವರ್ಗಗಳ ಪ್ರವರ್ಗ -ಎ ಮೀಸಲು ಸ್ಥಾನದಿಂದ ಬಸವರಾಜು.ಎಂ ಅವಿರೋಧ ಆಯ್ಕೆ,
ಹಿಂದುಳಿದ ವರ್ಗಗಳ ಪ್ರವರ್ಗ -ಬಿ ಮೀಸಲು ಸ್ಥಾನದಿಂದ ಭೀಮರಾಜು.ಜಿ.ಎಸ್ 24, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಎಚ್ .ಎಮ್ ಮುನಿನಾರಾಯಣಪ್ಪ ಅವಿರೋಧ ಆಯ್ಕೆ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ವೆಂಕಟೇಶ್. ಪಿ ಅವಿರೋಧ ಆಯ್ಕೆ, ಸಾಲಗಾರರಲ್ಲದ ಕ್ಷೇತ್ರದಿಂದ ಹನುಮಾನ್ ಬಿ .ಆರ್ 145 ಮತಗಳನ್ನು ಪಡೆಯುವುದರ ಮೂಲಕ ಮುಂದಿನ ಐದು ವರ್ಷಗಳ ಆಡಳಿತಾವಧಿಗೆ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಚೇತನ. ಆರ್ ಘೋಷಿಸಿದರು.
ಈ ವೇಳೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಮತ್ತು ನೂತನ ನಿರ್ದೇಶಕರಾದ ಮಾತನಾಡಿ ಆರ್.ಮುನೇಗೌಡ ಮಾತನಾಡಿ ಬ್ಯಾಂಕ್ ನ ಸರ್ವೋತೋಮುಖ ಅಭಿವೃದ್ಧಿಗೆ ಸ್ಪರ್ಧೆ ಮಾಡಿದ ಜೆಡಿಎಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳ ಸಹಕಾರವು ಹೀಗೆ ಮುಂದುವರೆಯಲಿ, ಗೆಲುವಿಗೆ ಕಾರಣಕರ್ತರಾದ ಪಕ್ಷದ ಹಿರಿಯ ಮುಖಂಡರು , ಕಾರ್ಯಕರ್ತರಿಗೂ ಮತ್ತು ಸಂಘದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ತಿಳಿಸಿ, ಬಹುಮತಗಳನ್ನು ಪಡೆಯುವುದರ ಮೂಲಕ ಆಯ್ಕೆಯಾಗಿರುವ ನೂತನ ನಿರ್ದೇಶಕರುಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ನಿರ್ದೇಶಕರ ಚುನಾವಣೆಯಲ್ಲಿ ಬಹುಮತ ಪಡೆಯುವುದರ ಮೂಲಕ ಆಯ್ಕೆಯಾಗಿರುವ ನೂತನ ನಿರ್ದೇಶಕರಿಗೆ ತಾಲೂಕಿನ ಹಲವು ಮುಖಂಡರು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ದೇವರಾಜ .ಎ, ಆರ್.ಮಂಜುನಾಥ್, ದೊಡ್ಡಸಣ್ಣೇ ಮುನಿರಾಜು, ಚಿನ್ನಕೆಂಪನಹಳ್ಳಿ ಆನಂದ್ ಸಿ.ಎ, ಬಿ.ಕೆ ರಾಧಾ, ಹನುಮಪ್ಪ, ಚೌಡಪ್ಪನಹಳ್ಳಿ ಎಂ.ಶಂಕರ್, ಹೊಸಳ್ಳಿ ಟಿ .ರವಿ, ಜನಕಮಣಿ, ಆನಂದ್ ಕುಮಾರ್, ರಾಮಾಂಜನಿದಾಸ್ ಸೇರಿದಂತೆ ತಾಲೂಕಿನ ಮುಖಂಡರು, ಸದಸ್ಯರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.