ದೇವನಹಳ್ಳಿ: ಭಾರತ ದೇಶದಾದ್ಯಂತ ನಡೆಯುತ್ತಿರುವ ಬಿಜೆಪಿ ಸದಸ್ಯತ್ವ ಅಭಿಯಾನವು ಒಂದು ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ ದೇವನಹಳ್ಳಿ ಮಂಡಲದಲ್ಲಿ ಸರಿಸುಮಾರು 10,500 ಸದಸ್ಯರನ್ನು ನೋಂದಾಯಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ. ದಾಖಲೆ ಸೃಷ್ಠಿಸಿರುವ ನಮ್ಮ ದೇವನಹಳ್ಳಿ ಮಂಡಲ ಇದಕ್ಕೆ ಕಾರಣಕರ್ತರಾದ ಅಂಬರೀಶಗೌಡರು ಅವರ ಪ್ರಯತ್ನ ಮಾದರಿಯಾಗಿದೆ” ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಎಂ .ರವಿಕುಮಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ದೇವನಹಳ್ಳಿ ತಾಲೂಕು ಮಂಡಲದ ವತಿಯಿಂದ 6,000 ಸದಸ್ಯರನ್ನು ನೋಂದಾಯಿಸಿದ ನಿಕಟಪೂರ್ವ ಅಸಂಘಟಿತ ಕಾರ್ಮಿಕ ಪ್ರಕೋಷ್ಟದ ಜಿಲ್ಲಾಧ್ಯಕ್ಷ ಅಂಬರೀಶ್ ಗೌಡರಿಗೆ ಅಭಿನಂದಿಸಿದರು.ನಿಕಟಪೂರ್ವ ಅಸಂಘಟಿತ ಕಾರ್ಮಿಕ ಪ್ರಕೋಷ್ಟದ ಜಿಲ್ಲಾಧ್ಯಕ್ಷ ಅಂಬರೀಶ್ ಗೌಡ ಮಾತನಾಡಿ ಕಾರ್ಯಕರ್ತರೊಂದಿಗೆ ಪದಾಧಿಕಾರಿಗಳು, ಮುಖಂಡರು ಮುಂದೆ ಇದ್ದು ಪ್ರತಿ ಬೂತ್ ಮಟ್ಟದಲ್ಲಿ ಜವಾಬ್ದಾರಿ ತೆಗೆದುಕೊಂಡು ಸಾಗಿದ್ದೇ ಆದಲ್ಲಿ ಗುರಿ ತಲುಪುವ ನಿಟ್ಟಿನಲ್ಲಿ ಅಸಾಧ್ಯವನ್ನು ಸಾಧ್ಯವಾಗಿಸಬಹುದು.
“ವಿಕಸಿತ ಭಾರತದ ಸಂಕಲ್ಪ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಜೀ ಅವರಿಗೆ ಬಲ ತುಂಬುವಲ್ಲಿ ಕರ್ನಾಟಕ ಬಹುದೊಡ್ಡ ಕೊಡುಗೆ ನೀಡುವ ನಿಟ್ಟಿನಲ್ಲಿ ಈ ಪರಿಯ ಪ್ರಯತ್ನಗಳು ಕಾರ್ಯಕರ್ತರಲ್ಲಿ ಪ್ರೇರಣೆ ತುಂಬಲಿದೆ” .ಅದರ ಪರಿಣಾಮವಾಗಿ ಸದಸ್ಯತ್ವ ಅಭಿಯಾನವು ಇನ್ನಷ್ಟು ಬಿರುಸಿನಿಂದ ನಡೆಯಲಿ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದೇಸು ನಾಗರಾಜ್ ಅನಿಲ್ ಯಾದವ್, ಮಧು ಸೂದನ್, ಮಹಿಳಾ ಮುಖಂಡರಾದ ವಿಮಲಾ ಶಿವುಕುಮಾರ್, ದಾಕ್ಷಾಯಣಿ, ಪುನೀತ, ಪ್ರೇಮ, ರಜನಿ, ನಾಗವೇಣಿ ಸೇರಿದಂತೆ ಹಲವಾರು ಮುಖಂ ಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.