ದೇವನಹಳ್ಳಿ: ಸಂವಿಧಾನದ ಚೌಕಟ್ಟನಿಲ್ಲಿ ಶಾಸಕಾಂಗ,ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ಪತ್ರಿಕಾ ರಂಗವೂ ಸಹ ಬಹಳ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು, ಗ್ರಾಹಕ ವ್ಯವಹಾರಗಳ ಹಾಗೂ ಬೆಂ.ಗ್ರಾ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಅವರು ಪಟ್ಟಣದ ಬೆಂ.ಗ್ರಾ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ತಾಲೂಕು ಸಂಘದಿಂದ ಮಾನ್ಯ ಸಚಿವರು ಅಭಿನಂಧನೆ ಸ್ವೀಕರಿಸಿ ಮಾತನಾಡಿ ಸಮಾಜದಲ್ಲಿ ಯಾರೇ ದೊಡ್ಡ ವ್ಯಕ್ತಿಯಿದ್ದರು, ಎಷ್ಟೆ ಪ್ರಭಲರಾಗಿದ್ದರೂ ಸಹ ಅವರ ತಪ್ಪುಗಳನ್ನು ಗುರುತಿಸಿ ಸಮಾಜಕ್ಕೆ ಸುದ್ದಿಯ ರೂಪದಲ್ಲಿ ತಿಳಿಸುವ ಕಾರ್ಯವನ್ನು ಮಾಡುತ್ತಿರುವ ಪತ್ರಕರ್ತರ ಕೆಲಸ ಅತ್ಯುತ್ತಮವಾದದ್ದು ತಾವೂ ಈ ಸಮಾಜದ ಸಾರ್ವಜನಿಕರಿಗೆ ವಸ್ತುನಿಷ್ಠ ನೈಜ್ಯವಾದ ಸುದ್ದಿಗಳನ್ನು ಬಿಂಬಿಸುವ ಕೆಲಸ ಮಾಡಬೇಕು, ಉಹಾ-ಪೋಹ ಸುದ್ದಿಗಳಿಂದ ಜನರು ಬಹಳ ತೊಂದರೆ ಅನುಭವಿಸುವಂತಾಗಲಿದೆ ಎಂದರು.
ಈ ಸಮಯದಲ್ಲಿ ಪತ್ರಕರ್ತರ ಸಂಘದಿಂದ ಸಂಘದ ಕಛೇರಿಗೆ ನಿವೇಶನ, ನಿವೇಶನ ರಹಿತ ಪತ್ರಕರ್ತರಿಗೆ ನಿವೇಶನ ನೀಡುವಂತೆ ಮನವಿ ನೀಡಲಾಯಿತು, ಮನವಿಯನ್ನು ಉದ್ದೇಶಿಸಿ ಸಚಿವರು ಮಾತನಾಡಿ ಸೂಕ್ತವಾದ ಜಾಗವನ್ನು ಗುರ್ತಿಸಿ ನೀಡಲು ಕಂದಾಯ ಇಲಾಖೆಗೆ ಸೂಚಿಸುತ್ತೇನೆ ಶೀಘ್ರವಾಗಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಅಂತರ ರಾಷ್ಠ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದಅಧ್ಯಕ್ಷರಾದ ದ್ಯಾವರಹಳ್ಳಿ ಶಾಂತಕುಮಾರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ಸಿ.ಜಗನ್ನಾಥ್, ಜಿ.ಪಂ. ಮಾಜಿ ಸದಸ್ಯ ಕೆ.ಸಿ. ಮಂಜುನಾಥ್, ಶ್ರೀನಿವಾಸ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುನೀಲ್, ಪ್ರ.ಕಾರ್ಯದರ್ಶಿ ಮುನಿನಾರಾಯಣಪ್ಪ, ಹಾಗೂ ಜಿಲ್ಲಾ ಸಮಿತಿ, ಹಾಗೂ ತಾಲೂಕು ಸಮಿತಿ ಸದಸ್ಯರು ಉಪಸ್ಥಿತರಿದ್ದರು.