ದೇವನಹಳ್ಳಿ: ಭಾರತದ ಸಾಹಿತ್ಯ ಸಂಸ್ಕೃತಿ ಮತ್ತು ಸನಾತನ ಧರ್ಮವನ್ನು ದೇಶವಿದೇಶಗಳಲ್ಲಿ ದಿವ್ಯ ದಿನೇಶ್ ತಮ್ಮ ಕಲಾ ಪ್ರತಿಭೆಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ರಾಜಶ್ರೀ ನಾಗರಾಜ್ ಯಾದವ್ ತಿಳಿಸಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಕಲಾ ಮಂಟಪದ ಆವರಣದಲ್ಲಿ ಆರಾಧನಾ ನೃತ್ಯ ಶಾಲೆಯಿಂದ ನಡೆದ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಾಥಮಿಕ ಹಂತದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಸಂಗೀತ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಮೈಗೂಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಪ್ರತಿಭೆ ಅನಾವರಣ ಸಾಧ್ಯವಿದೆ ಭರತನಾಟ್ಯದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿಸಿಕೊಡಬೇಕು ಎಂದು ಹೇಳಿದರು.
ಮೀನಾಕ್ಷಿ ಕೃಷ್ಣ ಭೈರೇಗೌಡ ಮಾತನಾಡಿ ಪಾಶ್ವಿ ಮಾತ್ಯ ಸಂಸ್ಕೃತಿಯ ಹಾವಳಿಯಿಂದ ನಮ್ಮ ದೇಶದ ಸಂಸ್ಕೃತಿ ನಶಿಸಿ ಹೋಗುತ್ತಿದೆ ಆದ್ದರಿಂದ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಮಹಾಭಾರತ ರಾಮಾಯಣ ಮತ್ತು ಭಗವದ್ಗೀತೆ ಗ್ರಂಥಗಳ ಸಾರಾಂಶವನ್ನು ಮನೆ ಶಾಲೆಗಳಲ್ಲಿ ಅಭ್ಯಾಸ ಮಾಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಿವ್ಯಶ್ರೀ ದಿನೇಶ್ ಅವರು ರಂಗಪ್ರವೇಶ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು, ಜಿಲ್ಲಾ ಯಾದವ ಸಮುದಾಯದ ಅಧ್ಯಕ್ಷ ಡಾಕ್ಟರ್ ನಾರಾಯಣಸ್ವಾಮಿ, ನಂದಿ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ ಕೆ ಚಂದ್ರಶೇಖರ್, ಲಲಿತಮ್ಮ ರಾಧಮ್ಮ ಉಷಾ ಎಂ ಆನಂದ್ ಎಸ್ ನಂಜುಂಡರಾವ್, ಹರಿ ಕುಮಾರ್ ವಿಶ್ವನಾಥ್ ಆರಾಧನ ನೃತ್ಯ ಶಾಲೆಯ ವಿದ್ವಾನ್ ನಾಗಭೂಷಣ್ ಉಪಸ್ಥಿತರಿದ್ದರು.