ಬಂಗಾರಪೇಟೆ: ಯರ್ಗೋಳ್ ಡ್ಯಾಂನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಶಾಸಕ ಎಸ್. ಎನ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಮರಾಠರ ಸಂಘ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿವಾಜಿ ಮಹಾರಾಜರು ಧೈರ್ಯಶಾಲಿಗಳು, ಕ್ರಿಯಾಶೀಲರು, ಸರ್ಮಧರ್ಮ ಪರಿಪಾಲಕರು, ಅವರು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರಲಿಲ್ಲ, ತಮ್ಮ ತಾಯಿಯವರ ಪ್ರೇರಣೆಯಿಂದ ಹುಟ್ಟು ಹೋರಾಟಗಾರರಾಗಿದ್ದರು, ನಿಮ್ಮ ಸಮಾಜ ಮಾತು ಕೊಟ್ಟರೆ ಮಾತು ತಪ್ಪುವುದಿಲ್ಲ, ಉತ್ತಮ ಸಮಾಜವಾಗಿದೆ ಎಂದು ಬಣ್ಣಿಸಿದರು,
ಮರಾಠ ಸಮುದಾಯದಿಂದ ಬೇಡಿಕೆ ಇಟ್ಟಿರುವಂತಹ ಕಾಮಸಮುದ್ರ ಡಬಲ್ ರಸ್ತೆಗೆ ಛತ್ರಪತಿ ಶಿವಾಜಿ ಹೆಸರು ನಾಮಕರಣ ಮಾಡಬೇಕೆಂಬ ಬೇಡಿಕೆಗೆ ಶಾಸಕರು ಮಾಡುವುದಾಗಿ ಭರವಸೆ ನೀಡಿದರು ನಂತರ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿ ಕೊಡುತ್ತೇನೆಂದು ಭರವಸೆ ನೀಡಿದರು.ಯರ್ಗೋಳ್ ಸಂಪರ್ಕ ರಸ್ತೆ ಅಭಿವೃದ್ಧಿಗಾಗಿ 40 ಲಕ್ಷ ರೂ. ಮಂಜುರಾಗಿದೆ. ಒಂದು ವಾರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದೆಂದರು, ನಿಮ್ಮ ಭಾಗಕ್ಕೆ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಸೇರಿದಂತೆ ಎಲ್ಲಾ ಮೂಲ ಸೌಲಭ್ಯವನ್ನು ಒದಗಿಸಲಾಗಿದೆಂದರು.
ಆನೆಗಳು ಗಡಿಭಾಗದಲ್ಲಿ ಕಾಡಿನ ಒಳಗೆ ಬರದಂತೆ ಅರ್ಧ ಭಾಗ ಪೆನ್ಸಿ ಂಗ್ ಹಾಕಿದ್ದು ಉಳಿದ ಭಾಗಕ್ಕೆ ಫೆನ್ಸಿಂಗ್ ಹಾಕಲಾಗುವುದೆಂದರು.
ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷ ಗೋವಿಂದ, ತಹಸೀಲ್ದಾರ್ ಸುಜಾತ, ಬಿಇಒ ಜಿ.ಗುರುಮೂರ್ತಿ, ಸಂಘದ ಅಧ್ಯಕ್ಷ ಚಂದ್ರಶೇಖರ್, ಪುರಸಭಾ ಸದಸ್ಯೆ ಸೌಂದರ್ಯ ಪ್ರಭಾಕರ್, ಗ್ರೇಡ್ 2 ತಹಶೀಲ್ದಾರ್ ಗಾಯಿತ್ರಿ, ಸಮಾಜ ಸೇವಕ ಎ.ಬಾಬು, ಮಾಜಿ ತಾ.ಪಂ. ಸದಸ್ಯೆ ಅಂಬೂಭಾಯಿ, ಮುಖಂಡರುಗಳಾದ ಕಾಶಿನಾಥ್, ಮನ್ನೂಜೀರಾವ್, ಪ್ರಕಾಶ್, ಗಂಗೋಜಿರಾವ್, ಕೇದಾರನಾಥ್, ಸೌಂದರ್ಯ, ಅಂಜಲಿದೇವಿ ಸೇರಿದಂತೆ ಇನ್ನೂ ಮೊದಲಾದವರು ಹಾಜರಿದ್ದರು.