ದೇವನಹಳ್ಳಿ: ಪಟ್ಟಣದ 9ನೇ ವಾರ್ಡಿನ ನೀರಗಂಟಿಪಾಳ್ಯದ ದೊಡ್ಡಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಹೆಚ್. ಮುನಿಯಪ್ಪ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿ ಈ ಬಾರಿಉತ್ತಮ ಮಳೆಯಾದ ಪರಿಣಾಮ ಕೆರೆ ತುಂಬಿದೆ. ಸಾಕಷ್ಟು ನೀರು ಶೇಖರಣೆಯಾಗಿದ್ದು ಸದ್ಯ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಕೆರೆಯ ನೀರು ಉಪಯೋಗವಾಗುತ್ತದೆ. ಇದರಿಂದ ಸಂತೋಷಗೊಂಡ ರೈತರು ಹಾಗೂ ಸ್ಥಳೀಯರು ಪರವಾಗಿ ಕೆರೆಗೆ ಬಾಗಿನ ಅರ್ಪಿಸಿದ್ದೇವೆ ಎಂದರು.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್ .ವಿ ಮಾತನಾಡಿ ಪ್ರಸಕ್ತ ವರ್ಷ ಮಳೆ ಚನ್ನಾಗಿ ಆಗಿದೆ, ರೈತರು ಖುಷಿಯಲ್ಲಿ ಇದ್ದಾರೆ,ಕೆರೆ-ಕುಂಟೆಗಳು ತುಂಬಿವೆ ಹಾಗಾಗಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವಿರುವುದರಿಂದ ಆದಷ್ಟು ಶೀಘ್ರವೇ ಈ ಭಾಗದ ನೀರಾವರಿ ಯೋಜನೆಗಳು ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಜಗನ್ನಾಥ್, ಕೃಷಿ ಸಮಾಜದ ಅಧ್ಯಕ್ಷರಾದ ರವಿಕುಮಾರ್, ಪುರಸಭಾ ಸದಸ್ಯರಾದ ಡಿ.ಆರ್ ಬಾಲರಾಜು, ಕೋಡಿಮಂಚೇನಹಳ್ಳಿ ಎಸ್. ನಾಗೇಶ್, ಮುನಿಕೃಷ್ಣ ಮುಖಂಡರಾದ ಮೂರ್ತಿ, ನೀರಗಂಟಿ ಪಾಳ್ಯದ ನಾಗರಾಜು, ಎಸ್. ಸಿ ಚಂದ್ರಪ್ಪ, ನಾರಾಯಣಸ್ವಾಮಿ, ಮುನಿಯ್ಯ, ಪೂಜಪ್ಪ, ಯಜಮಾನ ಚಿಕ್ಕ ಅಂಜನಪ್ಪ ಹಾಗೂ ಊರಿನ ಗ್ರಾಮಸ್ಥರು ಭಾಗಿಯಾಗಿದ್ದರು.