ದೇವನಹಳ್ಳಿ: ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಪೂಜಾ ವಿದಿವಿಧಾನಗಳಿಂದ ಮಳೆ – ಬೆಳೆ ಉತ್ತಮವಾಗಿ ಬರಲಿದ್ದು ಜನರಲ್ಲಿ ಸೌಹಾರ್ಧತೆ ಸಹ ಮೂಡಲಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಅವರು ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ದೊಡ್ಡಚೀಮನಹಳ್ಳಿ ಗ್ರಾಮದಲ್ಲಿ ಪುರಾತನ ಕಾಲದಿಂದಲೂ ನೆಲೆಸಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ನೂತನ ವಿಮಾನಗೋಪುರ ಕಳಶಸ್ಥಾಪನೆ, ಪ್ರಾಣಪ್ರತಿಷ್ಠಾಪನೆ ಹಾಗೂ ಕುಂಬಾಭಿಷೇಕ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿ ಮಾತನಾಡಿ ಭಗವಂತನ ಆಶೀರ್ವಾದ ಪಡೆದು ಲೋಕಕಲ್ಯಾಣಕ್ಕಾಗಿ ಇಂತಹ ಪ್ರತಿಷ್ಠಾ ಕಾರ್ಯಕ್ರಮಗಳನ್ನು ಮಾಡುವುದು ಗ್ರಾಮೀಣ ಭಾಗದ ಜನರಲ್ಲಿ ಸಾಮರಸ್ಯ ಮೂಡು ಜೊತೆಗೆ ಗ್ರಾಮಗಳಿಗೆ ಹಾವುದೇ ಆತಂಕ ಬಾರದಿರಲಿ ಎಂದು, ದೇವಾಲಯಗಳು ಗ್ರಾಮಸ್ಥರ ಎಲ್ಲಾ ಸಮುಧಾಯಗಳನ್ನು ಒಂದು ಮಾಡಲಿವೆ, ಮಾನವನ ಸಂಬಂಧವನ್ನು ಗಟ್ಟಿಗೊಳಿಸಲಿದೆ ಎಂದರು.
ಬಯಪ ಅಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್ ಮಾತನಾಡಿ ಗ್ರಾಮಸ್ಥರು ಎಲ್ಲರೂ ಒಗ್ಗೂಡಿ ದೇವರ ಕಾರ್ಯವನ್ನು ಅದ್ದೂರಿಯಾಗಿ ಮಾಡುತ್ತಿದ್ದು ಸರ್ವರಿಗೂ ಒಳಿತಾಗುವ ಉದ್ದೇಶದೊಂದಿಗೆ ಶ್ರೀ ಅಂಜನೇಯಸ್ವಾಮಿ ಮತ್ತು ನವಗ್ರಹ ವಿಮಾನ ಗೋಪುರ ಕಳಶ ಸ್ಥಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕುಂಬಾಭಿಷೇಕ ಮಾಡಲಾಗಿದೆ ದೇವರ ಆಶೀರ್ವಾದದಿಂದ ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ಗ್ರಾಮದ ಕಾಂಗ್ರೆಸ್ ಮುಖಂಡ ಡಿ.ಎಂ. ದೇವರಾಜ್ ಮಾತನಾಡಿ ದಾರ್ಮಿಕ ದತ್ತಿ ಇಲಾಖೆ, ಊರಿನ ಹಲವು ಮುಖಂಡರು ಮತ್ತು ಯುವಕರು ಎಲ್ಲರೂ ಒಗ್ಗೂಡಿ ಮೂರು ದಿನಗಳ ಕಾಲ ಸಂತಸದಿಂದ ಅದ್ದೂರಿಯಾಗಿ ಶ್ರೀ ಆಂಜನೇಯಸ್ವಾಮಿಯನ್ನು ಆನೆಯ ಜಂಬೂ ಸವಾರಿಯ ಮೂಲಕ ಮೆರವಣಿಗೆ ಮಾಡಿ ಪ್ರತಿಷ್ಠಾಪಿಸಲಾಗಿದೆ, ಹಾಗೂ ನವಗ್ರಹ ಪೀಠ ಪ್ರಾಣಪ್ರತಿಷ್ಠಾಪನೆ, ಕುಂಬಾಭಿಷೇಕವನ್ನು ಮಾಡಲಾಗಿದೆ, ಎಲ್ಲರಿಗೂ ಭಗವಂತನ ಕೃಪೆಯು ಇರಲಿ, ಎಲ್ಲರ ಸಹಕಾರದಿಂದ ಇನ್ನೂ ಹೆಚ್ಚು ಧಾರ್ಮಿಕ ಕಾರ್ಯಗಳು ನಡೆಯಲು ಭಗವಂತ ಶಕ್ತಿ ನೀಡಲಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಎಸ್.ಎಲ್.ವಿ ಕನ್ಸ್ಟ್ರಕ್ಷನ್ ಸುನಿಲ್ಗೌಡ, ಸೋಲೂರು ಕೋದಂಡರಾಮಯ್ಯ, ಬಿ.ರಾಜಣ್ಣ, ಎಸ್.ಪಿ.ಮುನಿರಾಜ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಕುಂದಾಣ ಗ್ರಾ.ಪಂ. ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀಮತಿ ಮಾಲ ದೇವರಾಜ್, ಜಿಲ್ಲಾ ಧಾರ್ಮಿಕ ದತ್ತಿ ತಹಶೀಲ್ದಾರ್ ಜಿ.ಜೆ. ಹೇಮಾವತಿ ಪುರೋಹಿತ ಎನ್. ಆನಂದಶಾಸ್ತ್ರಿ ಮತ್ತು ತಂಡದವರು, ಅರ್ಚಕ ಸುಬ್ರಮಣಿ, ದೊಡ್ಡಚೀಮನಹಳ್ಳಿಯ ಎಲ್ಲಾ ಗ್ರಾಮಸ್ಥರು ಭಾಗವಹಿಸಿದ್ದರು.