ಬೆಂಗಳೂರು ದೊಡ್ಡಬೊಮ್ಮಸಂದ್ರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿದೇವಿಯ ೩೩ನೇಜನ್ಮೋತ್ಸವ ಕಾರ್ಯಕ್ರಮ ಜುಲೈ ೨೬-೨೭ರಂದು ಲಯನ್ ಡಾ.ಬಿ.ಎಂ.ರವಿನಾಯ್ಡುರವರ ಕುಟುಂಬದ ನೇತೃತ್ವದಲ್ಲಿ ಜರುಗಲಿದೆ.
೨೬ ರಂದು ಶುಕ್ರವಾರ ಸಂಜೆ ೪ಕ್ಕೆ ವಾದ್ಯಗಳ ಸಮೇತ ಮಹಾಗಣಪತಿ ಹಾಗೂ ಮೂಲ ದೇವತೆಯ ಪೂಜೆ, ಪುಣ್ಯಾಹ, ರಕ್ಷಬಂದನ ಕಳಸ ಪ್ರತಿಷ್ಠಾಪನೆ, ಮಹಾ ಚಂಡಿಕ ಹೋಮ ಇತ್ಯಾದಿ ಪೂಜಾ ಕಾರ್ಯಕ್ರಮ ಜರುಗಲಿದೆ.೨೭ರಂದು ಶನಿವಾರ ವೇದಪಾರಾಯಣ, ಚಾಮುಂಡಿ ಹೋಮ,ಹಿರಿಯ ಮುತ್ತೈದೆಯರಿಗೆ ಬಾಗಿನ ಸೇವೆ, ಸಂಜೆ ರಾಜ ಬೀದಿಗಳಲ್ಲಿ ಶ್ರೀ ಚಾಮುಂಡೇಶ್ವರಿದೇವಿಯ ಮೆರವಣಿಗೆ ಏರ್ಪಡಿಸಿದೆ.
ಶನಿವಾರ ೨೭ರಂದು ಬೆಳಿಗ್ಗೆ ೯ ರಿಂದ ಸಂಜೆ ೪ ರವರೆಗೆ ಬೃಹತ್ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದು, ಸಾಮಾನ್ಯ ರೋಗ ಪರೀಕ್ಷೆ,ದಂತ-ನೇತ್ರ,ಸಕ್ಕರೆ ಕಾಯಿಲೆ,ರಕ್ತದೊತ್ತಡ ಪರೀಕ್ಷೆ ಮಾಡಿ ಉಚಿತವಾಗಿ ಔಷಧಿಗಳನ್ನು ನೀಡಲಾಗುವುದು. ಕಿಡ್ನಿ ಸಮಸ್ಯೆಗೆ ಪರಿಹಾರ ನೀಡಲಾಗುವುದು.ಈ ಬೃಹತ್ ಉಚಿತ ಆರೋಗ್ಯ ಶಿಬಿರಕ್ಕೆ ಸೇವಾಕರ್ತರಾದ ಬಿಇಎಲ್ ರಸ್ತೆಯಲ್ಲಿರುವ ಶಿರಡಿ ಸಾಯಿ ಆಸ್ಪತ್ರೆ, ನೆಲಮಂಗಲದ ಮಲ್ಲಿಗೆ ಮೆಡಿಕಲ್ಸ್ ಕೆ.ಎನ್.ಪ್ರಕಾಶ್,ಮಿಟೀಯರ್ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಅಂಡ್ ಪಾಲಿಟೆಕ್ನಿಕ್,ವಿದ್ಯಾರಣ್ಯಪುರ, ನಾಗರಾಜ್ ಡಯಾಗ್ನಸ್ಟಿಕ್ ಸೆಂಟರ್,ದೊಡ್ಡಬೊಮ್ಮಸಂದ್ರ, ಪ್ರಕಾಶ್ ಟಿ.ಎನ್. ಡಿಸಿ,ಔಷಧಿಗಳ ಸಹಾಯರ್ಥ, ವೈಟಲ್ಸ್ ಫಾರ್ಮಸಿಟಿಕಲ್, ಮಲ್ಲೇಶ್ವರಂ ಹಾಗೂ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದೆ.
ಈ ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ಟ್ ಜಿಎಲ್ಟಿ-ಕೋಆರ್ಡಿನೇಟರ್ ಆದ ಲಯನ್ ಆರ್.ಲೀಲಾಕೃಷ್ಣ, ಪಿಎಂಜೆಎಫ್,ಲಯನ್ ಮಂಜುಳಾ, ಲಯನ್ ಶಿಲ್ಪಾಭರತ್, ಲಯನ್ಸ್ ಅಧ್ಯಕ್ಷ ಸಂಜೀವಪ್ಪ, ಕಾರ್ಯದರ್ಶಿ ತಂಬಿರಾಜ್, ಸೇರಿದಂತೆ ಇನ್ನು ಅನೇಕ ಲಯನ್ಸ್ ಸಂಸ್ಥೆಯ ಅಧಿಕಾರಿಗಳು ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಲಯನ್ ಡಾ.ಬಿ.ಎಂ.ರವಿನಾಯ್ಡು, ಪಿಎಂಜೆಎಫ್ ತಿಳಿಸಿದ್ದಾರೆ.



