ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯ ಎಸ್.ಎಚ್.ಪದ್ಮರಾಜ್ ಮತ್ತು ಅವರ ತಂಡ 43ನೇ ವರ್ಷದ ಧರ್ಮಸ್ಥಳಕ್ಕೆ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.ಬಸವೇಶ್ವರನಗರದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ, ಕಿರು ಅರಣ್ಯ ಸಂಸ್ಥಾಪಕ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎಸ್.ಎಚ್.ಪದ್ಮರಾಜ್ ಮತ್ತು ಅವರ ತಂಡ 43ನೇ ವರ್ಷದ ಪಾದಯಾತ್ರೆ ಕೈಗೊಂಡಿದ್ದು,
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಎಚ್.ಪದ್ಮರಾಜ್ ಅವರು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕಳೆದ 43 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ್ ಸ್ವಾಮಿಯ ದರ್ಶನಕ್ಕೆ ಕಾಲು ನಡಿಗೆಯಲ್ಲಿ ಹೋಗುತ್ತಿದ್ದೇವೆ ಎಂದರು.ಲೋಕಕಲ್ಯಾಣಕ್ಕಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳಲಾಗುತ್ತಿದೆ. ಇದೇ ವೇಳೆ ಗಣ್ಯರು ಹಾಗೂ ಭಕ್ತರು ಹಾಜರಿದ್ದು, ರಸ್ತೆ ಮಾರ್ಗದಲ್ಲಿ ಶಿವನ ದೇವಸ್ಥಾನದಲ್ಲಿ ಪೂಜೆಯಲ್ಲಿ ಪಾಲ್ಗೊಂಡು ದರ್ಶನ ಪಡೆದು ಪಾದಯಾತ್ರೆ ಮುಂದುವರಿಸಿದರು.