ಬೇಲೂರು: ಮಹಾಶಿವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿರುತ್ತಿರುವ ಸಾವಿರಾರು ಪಾದಯಾತ್ರೆಗಳಿಗೆ ತಾಲೂಕಿನ ಸುರಪುರ ಗಡಿಯಲ್ಲಿ ಉದ್ಯಮಿಗಳಾದ ರಾಜೇಗೌಡ ಮತ್ತು ಮಕ್ಕಳಿಂದ ಅನ್ನದಾಸೋಹ ಕಾರ್ಯವನ್ನು ಏರ್ಪಡಿಸಲಾಯಿತು. ಪಾದಯಾತ್ರೆ ಗಳಿಗೆ ಪುಷ್ಪಗಿರಿ ಜಗದ್ಗುರುಗಳು ದಾಸೋಹ ಕಾರ್ಯವನ್ನು ನಡೆಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಪುಷ್ಪಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಕಳೆದ ಎರಡು ದಶಕದಿಂದ ಧರ್ಮಸ್ಥಳ ಬೆಂಗಳೂಮಹಾಶಿವರಾತ್ರಿ ಅಂಗವಾಗಿ ಪಾದಯಾತ್ರೆಯನ್ನು ನಡೆಸುವಂತಹ ಭಕ್ತರು ರಸ್ತೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಜಾಗೃತಿಯಿಂದಲೇ ಪಾದಯಾತ್ರೆಯನ್ನು ಮಾಡಬೇಕಾಗುತ್ತದೆ.
ಕಾರಣ ಕೆಲವು ಕಡೆ ಅಪಘಾತಗಳು ಸಂಭವಿಸುತ್ತಿವೆ ಈ ದೆಸೆಯಲ್ಲಿ ವಾಹನ ಸವಾರರು ಕೂಡ ಪಾದಯಾತ್ರೆಗಳು ಇರುವ ಕಡೆ ನಿಧಾನವಾಗಿ ಚಲಿಸಬೇಕು ಎಂದು ಸಲಹೆಗಳನ್ನು ನೀಡಿದ ಅವರು ಲಕ್ಷಾಂತರ ಭಕ್ತರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಪಾದಯಾತ್ರೆ ಮೂಲಕವಾಗಿ ತೆರಳುತ್ತಾರೆ ದುಶ್ಚಟಗಳನ್ನ ಅವಗುಣಗಳನ್ನು ಬಟ್ಟು ಸನ್ಮಾರ್ಗದಿಂದ ನಡೆದಾಗ ಮಾತ್ರ ಪಾದಯಾತ್ರೆಗೆ ಅರ್ಥ ಬರುತ್ತದೆ ಎಂದರು.
ಬೇಲೂರು ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬಿ.ಎಂ.ರವಿಕುಮಾರ್ ಮಾತನಾಡಿ, ಧರ್ಮಸ್ಥಳ ಪಾದಯಾತ್ರೆಗಳಿಗೆ ಸುರಪುರದ ರಾಜೇಗೌಡರ ಕುಟುಂಬ ವರ್ಗ ಹಮ್ಮಿಕೊಂಡ ಅನ್ನದಾಸೋಹ ಕಾರ್ಯಕ್ರಮವನ್ನು ಪುಷ್ಪಗಿರಿ ಜಗದ್ಗುರುಗಳು ಚಾಲನೆ ನೀಡಿದ್ದು ನಿಜಕ್ಕೂ ಅರ್ಥಪೂರ್ಣವಾಗಿದೆ. ಪುಷ್ಪಗಿರಿ ಜಗದ್ಗುರುಗಳು ವಿವಿಧ ಜೊತೆಯಲ್ಲಿ ಸಮಾಜಕ್ಕೆ ಅಮೂಲ್ಯವಾದಂತ ಕೊಡುಗೆಯನ್ನು ನೀಡಿ ಪುಷ್ಪಗಿರಿ ಕ್ಷೇತ್ರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ್ದಾರೆ ಈಗಾಗಲೇ ಅವರು ಕೈಗೊಂಡ ಅನೇಕ ಜನಪರ ಮತ್ತು ಸಮಾಜಮುಖಿಯ ಕಾರ್ಯಗಳು ಅದ್ವಿತೀಯವಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸುರಪುರ ಗ್ರಾಮದ ಸೋಮಣ್ಣ ಮತ್ತು ಇನ್ನಿತರ ಗ್ರಾಮಸ್ಥರು ಹಾಜರಿದ್ದರು.