ಸದಾ ಹೊಸತನಕ್ಕಾಗಿ ಮಿಡಿಯುವ, ವಿವಿಧ ಸಂಶೋಧನೆ ಹಾಗೂ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿರುವ ರಾಜ್ಯದ ವಾರ್ತಾ ಇಲಾಖೆಯಲ್ಲಿ ವಿಶೇಷ ಅಪರೂಪದ ಅಧಿಕಾರಿಯಾಗಿರುವ ಮಂಜುನಾಥ ಸುಳ್ಳೊಳ್ಳಿಯ ಬಹುಮುಖ ಪ್ರತಿಭೆ ದೇಶ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಗಳಿಸಿದ್ದಾರೆ.
ಕಳೆದ 24 ವರ್ಷಗಳ ಅವಧಿಯ ಸುದೀರ್ಘ ಸೇವೆಯಲ್ಲಿ 6 ಜಿಲ್ಲೆಗಳಲ್ಲಿ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಸೇವೆ ಸಲ್ಲಿಸಿದ ಪ್ರತಿಯೊಂದು ಜಿಲ್ಲೆಯ ಜೀವ ವೈವಿಧ್ಯತೆ, ಇತಿಹಾಸ ಪರಂಪರೆ ಜನಪದರ ಕುರಿತು ಒಟ್ಟು 6 ಲಕ್ಷಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಹಾಗೂ 30 ಸಾವಿರ ಪುಟಗಳಷ್ಟು ಬರಹಗಳನ್ನು ಬೆರಳಚ್ಚು ಮಾಡಿದ್ದಾರೆ.
ಇಲಾಖೆಗೆ ಸೇರುವ ಮೊದಲೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಮಂಜುನಾಥ ಸುಳ್ಳೊಳ್ಳಿ ಇವರ ಐದಾರು ಪ್ರಬಂಧಗಳು ರಾಷ್ಟ್ರಮಟ್ಟದ Competition Success Review CSR ಮ್ಯಾಗಜಿನ್ನಲ್ಲಿ ಪ್ರಕಟಗೊಂಡಿದ್ದು ದಾಖಲೆಯೇ ಸರಿ. ಇಡೀ ದೇಶ ವಿದೇಶಗಳಲ್ಲಿ ಬಹು ಬೇಡಿಕೆಯ ಇಂಗ್ಲೀಷ ಬರಹಗಾರರಾಗಿದ್ದ ದಿ. ಮನೋಹರ ಮಳಗಾಂವಕರ ಇವರ ಗುರುಗಳಾಗಿದ್ದರು, 20 ವರ್ಷಗಳ ಇವರ ಒಡನಾಟ ಇವರನ್ನು ಸಂಶೋಧಕ ಹಾಗೂ ಅನ್ವೇಷಕನ್ನಾಗಿಸಿತು.
2014-15 ರಲ್ಲಿ ಬಾಗಲಕೋಟೆಯಲ್ಲಿ ಸೇವೆ ಸಲ್ಲಿಸುವಾಗ ಆಗಿನ ಉಸ್ತುವಾರಿ ಸಚಿವರಾದ ಎಸ್.ಆರ್.ಪಾಟೀಲ ಹಾಗೂ ಜಿಲ್ಲಾಧಿಕಾರಿ ಮನೋಜ ಜೈನ ಇವರ ಅವಧಿಯಲ್ಲಿ ಬದಾಮಿಯ ಚಾಲುಕ್ಯರ ಕುರಿತು “ರಿಡಿಸ್ಕವರಿಂಗ್ ಚಾಲುಕ್ಯನ್ ಲ್ಯಾಂಡ್” ಎಂಬ ಪುಸ್ತಕ ಪ್ರಕಟಿಸಿ ಚಾಲುಕ್ಯ ಉತ್ಸವದಲ್ಲಿ ಜನಪ್ರಿಯತೆ ಗಳಿಸಿದ್ದರು. ಇದರಿಂದಾಗಿ ಖ್ಯಾತ ಇತಿಹಾಸ ಸಂಶೋಧಕರಾದ ಡಾ. ಜಾರ್ಜ್ ಮಿಶೆಲ್ ಹಾಗೂ ಜಾನ್ ಫ್ಲಿಟ್ಸ ಇವರ ಭೇಟಿಗೆ ಬಂದಿದ್ದರು.
ಆಗಲೇ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಪ್ರಭಾರ ದೊರಕಿ ಅನೇಕ ವಿನೂತನ ಯೋಜನೆಗಳನ್ನು ಕೈಕೊಂಡರು. ಅದೇ ಸಮಯದಲ್ಲಿ ಧಾರವಾಡ ಪ್ರವಾಸೋದ್ಯಮ ಅಧಿಕಾರಿಯಾಗಿ 2 ವರ್ಷ ಪ್ರಭಾರ ವಹಿಸಿ ಜಿಲ್ಲಾಧಿಕಾರಿ ರಾಜೇಂದ್ರ ಜೋಳನ್ ನೇತೃತ್ವದಲ್ಲಿ ಧಾರವಾಡ ಇತಿಹಾಸ ಪರಂಪರೆ ಜೀವವೈಧ್ಯತೆ ಕುರಿತು ಕಿರು ಪುಸ್ತಕ ಹಾಗೂ ಕ್ಯಾಲೆಂಡರ್ಗಳನ್ನು ಹೊರ ತಂದಿದ್ದರು. 2016 ರಲ್ಲಿ ಗದಗದ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಹಾಗೂ ಜಿಲ್ಲಾಧಿಕಾರಿ ಮನೋಜ ಜೈನ ಮಾರ್ಗದರ್ಶನದಲ್ಲಿ ಲಕ್ಕುಂಡಿ ಉತ್ಸವದಲ್ಲಿ ಲಕ್ಕುಂಡಿ ಎ ಪಿಕ್ಟೋರಿಯಲ್ ಜರ್ನಿ ಎಂಬ ಪುಸ್ತಕವನ್ನು ಹೊರತಂದರು.
ಸದ್ಯ ಧಾರವಾಡ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಜೊತೆ ಹುಬ್ಬಳ್ಳಿಯ ರಾಜ್ಯ ಸಮಾಚಾರ ಕೇಂದ್ರ ಹಿರಿಯ ಸಹಾಯಕ ನಿರ್ದೇಶಕ ಹುದ್ದೆಯ ಪ್ರಭಾರ ವಹಿಸಿಕೊಂಡಿರುವ ಮಂಜುನಾಥ ಸುಳ್ಳೊಳ್ಳಿ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಧಾರವಾಡ ಜಿಲ್ಲೆಯ ಜೀವ ವೈವಿಧ್ಯತೆ, ವಾಸ್ತು ಶಿಲ್ಪ, ಇತಿಹಾಸ, ಪರಂಪರೆ ಬಗ್ಗೆ ಲಕ್ಷದಷ್ಟು ಛಾಯಾಚಿತ್ರಗಳನ್ನು ಕ್ಲಿಕಿಸಿದ್ದಾರೆ. ಎಲ್ಲ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುವ ಇಂಥ ಅಧಿಕಾರಿಗಳು ಧಾರವಾಡ ಜಿಲ್ಲೆಯಲ್ಲಿರುವುದು ಭಾಗ್ಯವೇ ಸರಿ.
ಕರ್ನಾಟಕ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಘಟ್ಟಗಳ ಸಮಗ್ರ ಮಾಹಿತಿ ಇವರ ಬೆರಳ ತುದಿಯಲ್ಲಿದೆ. ಕಾರವಾರ ಜಿಲ್ಲೆಯಲ್ಲಿದ್ದಾಗ ಕಾಡು ಜನರ ಆದಿವಾಸಿಗಳ ಬಗ್ಗೆ ವಿಶೇಷ ಬರಹ ಹಾಗೂ ಛಾಯಾಚಿತ್ರಗಳನ್ನು ದಾಖಲಿಸಿದ್ದರು. ವಿಜಯಪುರದಲ್ಲಿದ್ದಾಗ ಅಲ್ಲಿನ ಎಲ್ಲ ಸ್ಮಾರಕಗಳ ಬಗ್ಗೆ ಅಧ್ಯಯನ ಮಾಡಿ ಛಾಯಚಿತ್ರಗಳ ಕ್ಲಿಕ್ಕಿಸಿದ್ದರು. ಸಧ್ಯ ಸಹಕಾರ ಚಳುವಳಿಯ ನಾಡದ ಗದಗ ಜಿಲ್ಲೆಯ ಬಗ್ಗೆ ಅವರ ಪುಸ್ತಕ ಅರ್ಧಕ್ಕೆ ನಿಂತಿದೆ. ಈಗಾಗಲೇ 6 ಲಕ್ಷಕ್ಕೂ ಪುಸ್ತಕಗಳನ್ನು ಓದಿರುವ ಇವರು ಸದಾ ಬರವಣೆಗೆಯಲ್ಲಿ ತೊಡುಗಿಸಿಕೊಂಡಿರುತ್ತಾರೆ.
ಸದ್ಯ ಕಳೆದ 4 ವರ್ಷಗಳಿಂದ ಅವರು ಕರ್ನಾಟಕ ಸಾಂಸ್ಕøತಿಕ ನಾಯಕರಾದ ಬಸವಣ್ಣನವರು ಹೊರ ತಂದ ಇಷ್ಟಲಿಂಗ ತಂತ್ರಜ್ಞಾನ, ದೃಷ್ಠಿಯೋಗದ ಸಂಶೋಧನೆಯಲ್ಲಿ ತಮ್ಮನ್ನು ತಾವು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಬಸವಣ್ಣನವರು ಹೇಳಿದಂತೆ ತನ್ನ ತಾ ಅರಿಯಲು ಆತ್ಮ ಜಾಗೃತಿ ಗೊಳಿಸಿಕೊಳ್ಳಲು ಇಡಿ ಜಗತ್ತಿನಲ್ಲಿ ಇಷ್ಟಲಿಂಗ ಸರಳ ಶಕ್ತಿಶಾಲಿ ನಿಖರವಾದ ತಂತ್ರಜ್ಞಾನ ಎನ್ನುತ್ತಾರೆ. ಈಗಾಗಲೇ ಬಸವಣ್ಣನವರ ಸಾಂಸ್ಕøತಿಕ ನಾಯಕರೆಂದು ಘೋಷಿಸಿರುವ ಸರ್ಕಾರ ಬಸವಣ್ಣವರ ಇಷ್ಟಲಿಂಗ ಶಿವಯೋಗವನ್ನು ಶಾಲಾ-ಕಾಲೇಜುಗಳಲ್ಲಿ ಪ್ರಚಾರಗೊಳಿಸಿದರೆ ಐತಿಹಾಸಿಕ ಆಂದೋಲನ ಆಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಮಂಜುನಾಥ ಸುಳ್ಳೊಳ್ಳಿ.