ನಂಜನಗೂಡು: ನಗರದ 6 ನೇ ಕ್ರಾಸ್ ನಿಂದ 9ನೇ ಕ್ರಾಸ್ ವರೆಗಿನ ಕವರ್ ಡೆಕ್ ಪಕ್ಕದಲ್ಲಿರುವ ಫುಡ್ ಜೋನ್ ವನ್ನು ಶಾಸಕರಾದ ದರ್ಶನ್ ಧ್ರುವನಾರಾಯಣ್ ಹಾಗೂ ಗಣೇಶ್ ಪ್ರಸಾದ್ ಅವರು ಜೊತೆಗೂಡಿ ಉದ್ಘಾಟನೆ ಮಾಡಿದರು.ನಂತರ ಶಾಸಕರಾದ ದರ್ಶನ್ ಧ್ರುವನಾರಾಯಣ್ ಮಾತನಾಡಿ ವ್ಯಾಪಾರಸ್ಥರಿಗೆ ನಗರಸಭೆಯಿಂದ ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಟ್ಟು ವ್ಯಾಪಾರ ಮಾಡಲು ಉತ್ತಮ ವೇದಿಕೆಯನ್ನು ಸಜ್ಜು ಮಾಡಿದ್ದೇವೆ ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಎಲ್ಲರೂ ಒಂದೇ ಕಡೆ ಸೇರಿದರೆ ನಗರದ ರಸ್ತೆಗಳಲ್ಲಿ ಟ್ರಾಫಿಕ್ ತೊಂದರೆಗಳು ಸಹ ಇರುವುದಿಲ್ಲ ಆಹಾರಪ್ರಿಯರಿಗೂ ಯಾವುದೇ ಕಿರಿಕಿರಿ ಆಗುವುದಿಲ್ಲ ಎಂದರು.ಶಾಸಕರಾದ ಗಣೇಶ್ ಪ್ರಸಾದ್ ಮಾತನಾಡಿ ನಂಜನಗೂಡು ತಾಲೂಕಿನಲ್ಲಿ ಪ್ರಥಮವಾಗಿ “ಫುಡ್ ಜೋನ್” ಹೊಸ ಯೋಜನೆಯನ್ನು ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಮಾಡಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಉಪಾಧ್ಯಕ್ಷೆ ರಿಯಾನಾಬಾನು, ಪೌರಯುಕ್ತರಾದ ವಿಜಯ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ನಗರಸಭಾ ಸದಸ್ಯರಾದ ಮೀನಾಕ್ಷಿ ನಾಗರಾಜ್, ಮಹೇಶ್ , ಗಾಯತ್ರಿ, ಗಂಗಾಧರ್, ಪ್ರದೀಪ್, ಮಂಗಳಮ್ಮ. ಬಸವರಾಜು, ರವಿ, ದೀಪು,ಎ.ಇ.ಇ. ಮಹೇಶ್,ಹಲವು ಎ.ಇ.ಕುಮಾರ್, ಅಭಿಯಂತರರಾದ ಮೈತ್ರಾವತಿ, ರೇಖಾ ಸೇರಿದಂತೆ ನಗರಸಭೆ ಸಿಬ್ಬಂದಿ ವರ್ಗ, ಮುಖಂಡರು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.