ನಂದಿನಿ ಬಡಾವಣೆ ಫುಡ್ ಸ್ಟ್ರೀಟ್ ಟ್ರೇಡರ್ಸ್ ಅಸೋಸಿಯೇಷನ್ ವತಿಯಿಂದ ಸಂಘದ 2 ವರ್ಷದ ಸಂಘದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ, ಗೋಪಾಲಯ್ಯ ಅವರು ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಪಾಲ್ಗೊಂಡು ಭುವನೇಶ್ವರಿ ಫೋಟೋಗೆ ಹಾರ ಹಾಕಿ ಧ್ವಜಾರೋಹಣ ನೆರೆವೇರಿಸಿದರು.
ಇದೇ ಸಂದರ್ಭದಲ್ಲಿ ಈ ಸಂಘದ ವತಿಯಿಂದ 25.000 ಸಾವಿರ ರೂಪಾಯಿಗಳಮೊತ್ತದ ಚೆಕ್ ಅನ್ನು ಜಯಪ್ರಕಾಶ್ ನಾರಾಯಣ ಡಯಾಲಿಸಸ್ ಕೇಂದ್ರಕ್ಕೆ ತಮ್ಮ ಮಾನವೀಯತೆ ಮೆರೆದರು.ಶಾಸಕರಾದ ಕೆ ಗೋಪಾಲಯ್ಯ ಮಾತನಾಡಿ, ನೀವು ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬಹಳ ಸಂತಸ ತಂದಿದೆ. ನೀವೆಲ್ಲರೂ ಕನ್ನಡವನ್ನು ಕನ್ನಡ ಭಾಷೆ ಯನ್ನು ದೈನಂದಿನ ಜೀವನದಲ್ಲಿ ಬಳಕೆ ಮಾಡಬೇಕು.
ನೆರೆಯ ನಮ್ಮ ಸಹೋದರ ರಾಜ್ಯಗಳ ಜನರಿಗೆ ಕನ್ನಡ ಭಾಷೆಯಲ್ಲಿ ವ್ಯವಹರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿ, ಜೊತೆಗೆ ನಿಮ್ಮ ಸಂಘವು ಇಂದು 2 ನೇ ವರ್ಷದ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರಿಗೂ ಅಭಿನಂದನೆಗಳು. ಎಲ್ಲರೂ ಇದೇ ರೀತಿ ಒಗ್ಗಟ್ಟಾಗಿ ಅಣ್ಣ ತಮ್ಮಂದಿರಂತೆ ಬಾಳಿ ಜೊತೆಗೆ ನಿಮ್ಮ ಬಳಿ ಬರುವ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ದರದಲ್ಲಿ ಫುಡ್ ನೀಡಿಎಂದು ಹೇಳಿ ಶುಭ ಕೋರಿದರು.
ರಾಘವೇಂದ್ರ ಶೆಟ್ಟಿ ಮಾತನಾಡಿ ಕನ್ನಡ ಭಾಷೆಯನ್ನು ಉಳಿಸುವವರು ನೀವು ಮತ್ತು ಆಟೋ ಸಂಘದ ಸ್ನೇಹಿತರು, ನಮ್ಮ ಭಾಷೆ ನಾಡು ನುಡಿ ಬಗ್ಗೆ ಹೆಚ್ಚು ಒಲವನ್ನು ಬೆಳೆಸಿ ನಿಮ್ಮ ಸಂಘದ ಒಗ್ಗಟ್ಟು ಹೀಗೆ ಮುಂದುವರಿಯಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.ಇದೇ ಸಂದರ್ಭದಲ್ಲಿ ಶಾಸಕರು ಹಾಗೂ ಮಂಡಲ ಅಧ್ಯಕ್ಷರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ವಾರ್ಡ್ ಅಧ್ಯಕ್ಷ ಲೋಕೇಶ್, ಮುಖಂಡ ಸುರಭಿ ನಾಗರಾಜ್,ಸಂಘದ ಅಧ್ಯಕ್ಷರಾದ ಸತೀಶ್, ಗೌರವ ಅಧ್ಯಕ್ಷರಾದ ಯೋಗೇಶ್ ಉಪಾಧ್ಯಕ್ಷರು ಶಶಿಕುಮಾರ್ ಕಾರ್ಯದರ್ಶಿ ಸಿದ್ದು ಲೇಮನ್, ಮಹಿಳಾ ಕಾರ್ಯದರ್ಶಿ ಚೈತ್ರ ಖಜಾಂಚಿ ವಿರೂಪಾಕ್ಷ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.