ಹೊಸದಿಲ್ಲಿ: ಭಾರತಕ್ಕೆ ಟಿ20 ವಿಶ್ವಕಪ್ ತಂದಿತ್ತ ಬಳಿಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ಹೀಗಾಗಿ ಈ ಕ್ರಿಕೆಟ್ ಹೀರೋಗಳ ನಂ. 45 ಹಾಗೂ ನಂ. 18 ಜೆರ್ಸಿಗಳನ್ನೂ ನಿವೃತ್ತಿಗೊಳಿಸುವಂತೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಬಿಸಿಸಿಐಗೆ ಸಲಹೆ ಮಾಡಿದ್ದಾರೆ.
ಈಗಾಗಲೇ ಲೆಜೆಂಡ್ರಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ನಂ. 10 ಮತ್ತು ನಂ. 7 ಜೆರ್ಸಿಗಳನ್ನು ನಿವೃತ್ತಿಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಈ ಸಾಲಿಗೆ ರೋಹಿತ್ ಮತ್ತು ಕೊಹ್ಲಿ ಜೆರ್ಸಿಗಳೂ ಸೇರಬೇಕೆಂಬುದು ರೈನಾ ಬಯಕೆ. ಐಕಾನಿಕ್ ಜೆರ್ಸಿ ಸಂಖ್ಯೆಗಳು ಯಾವತ್ತೂ ಯುವ ಆಟಗಾರರಿಗೆ ಪ್ರೇರಣೆ ನೀಡುವಂತಿರಬೇಕು ಎಂಬುದಾಗಿ ಸುರೇಶ್ ರೈನಾ ಹೇಳಿದರು.