ಬೆಂಗಳೂರು : ಸೈಕಲ್ ಕ್ರೀಡಾಕೋಟದಡಿ ಅಂಕಪಟ್ಟಿ ನೀಡಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕವಾಗಿದ್ದ ಪೈಗಂಬರ್ ನಡಾಫ್ ರವರು ಮತ್ತೆ ಸೈಕಲ್ ತುಳಿವಿಕೆಯ ಕೋಟಾದಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನೇಮಕಗೊಳ್ಳಲು ಅಂಕಪಟ್ಟಿ ನೀಡಿದರು.
ಇವರು ನೀಡಿದ್ದ ಅಂಕಪಟ್ಟಿಯನ್ನು ಪರಿಶೀಲನೆಗಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯ ಸಹನಾ ಎಂಬ ಗುಮಾಸ್ತತೆಯು ಮೈಸೂರು ವಿಶ್ವವಿದ್ಯಾಲಯಕ್ಕೆ ಪರಿಶೀಲನೆಗಾಗಿ ಕಳುಹಿಸಿದ್ದರು. ಮೈಸೂರು ವಿಶ್ವವಿದ್ಯಾಲಯದವರು ಇದು ನಕಲಿ ಅಂಕಪಟ್ಟಿ ಎಂದು ನೀಡಿದ ದೂರಿನ ಅನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸಹನಾ ದೂರು ದಾಖಲಾಗಿದೆ.
ನಡಾಫ್ರವರು ಬೆಂಗಳೂರು ನಗರದ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಪೈಗಂಬರ್ ನಡಾಫ್ ರವರು ಬಿ ಎ ಪದವೀಧರರಾಗಿದ್ದು ಅಂಕಪಟ್ಟಿ ನೀಡಿ ಪೊಲೀಸ್ ಇಲಾಖೆಗೆ ಸೇರಿಕೊಂಡಿರುತ್ತಾರೆ.