ಬೆಂಗಳೂರು: ನಕಲಿ ಬಾಂಡ್ ಸೃಷ್ಟಿಸಿ ಕೆಲಸ ಮಾಡುತ್ತಿದ್ದ ಬ್ಯಾಂಕಿಗೆ ವಂಚಿಸಿ ನಾಪತ್ತೆಯಾಗಿರುವ ಮಹಿಳೆ ಹಾಗೂ ಇತರರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ ಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಎಫ್ ಡಿ ಎ ಆಗಿರುವ ಆಶಾಲತಾ ಎಂಬುವರ ವಿರುದ್ಧ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ವಿ ರಾಜುರವರು ದೂರು ಸಲ್ಲಿಸಿರುತ್ತಾರೆ.
19 ಕೋಟಿ 36ಲಕ್ಷರು ನಷ್ಟು ಹಣವನ್ನು ನಕಲಿ ಬಾಂಡ್ ಸೃಷ್ಟಿಸಿ ಬ್ಯಾಂಕಿಗೆ ವಂಚಿಸಿ ಆಶಾಲತಾ ರವರು ಪರಾರಿಯಾಗಿರುತ್ತಾರೆ.ಎಫ್ ಡಿ ಎ ಆಶಾಲತಾ ಚೀಫ್ ಅಕೌಂಟ್ ಆಫೀಸರ್ ಇಂಚಾರ್ಜ್ ಆಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಆಶಾಲತಾ ರವರನ್ನು ಬಂಧಿಸಲು ತಂಡವನ್ನು ರಚಿಸಿಸಲಾಗಿದೆ ಎಂದು ನಂದಿನಿ ಲೇಔಟ್ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ.