ಬೆಂಗಳೂರು: ಫೆಬ್ರವರಿ 17 ರಂದು ರಾಮನಗರದ ಉಪವಿಭಾಗ ಕಛೇರಿಗೆ ಜಾನ ಮೈಕಲ್ ಎಂಬ ಖಾಸಗಿ ವ್ಯಕ್ತಿಯೊಬ್ಬರು ನಾನು ಲೋಕಾಯಕ್ತ ಅಧಿಕಾರಿಯಂದು ಹೇಳಿಕೊಂಡು ರಾಮನಗರದ ಉಪವಿಭಾಗ ಕಛೇರಿಯಲ್ಲಿ ಕೆಲವೊಂದು ಪ್ರಕರಣಗಳಲ್ಲಿ ಆದೇಶ ಹೊರಡಿಸಬೇಕೆಂದು ಹೇಳಿದ್ದು, ನಂತರ ರಾಮನಗರ ಉಪವಿಭಾಗಾಧಿಕಾರಿಗಳಿಗೆ ಅನುಮಾನ ಬಂದು. ರಾಮನಗರ ಲೋಕಾಯುಕ್ತ ಕಛೇರಿಗೆ ಸಂಪರ್ಕ ಮಾಡಿ ಸದರಿ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ,ಜಾನ ಮೈಕಲ್ ಎಂಬ ಹೆಸರಿನ ಸಿಬ್ಬಂದಿಯಾಗಲಿ.
ಅಧಿಕಾರಿಯಾಗಲಿ ಯಾರುಇರುವುದಿಲ್ಲವೆಂದು ಖಚಿತ ಪಡಿಸಿಕೊಂಡು ಹಾಗು ರಾಮನಗರ ಲೋಕಾಯುಕ್ತ ನಿರೀಕ್ಷಕರು ಸ್ಥಳಕ್ಕೆ ಭೇಟಿ ಮಾಡಿ ವ್ಯಕ್ತಿಯನ್ನು ವಿಚಾರ ಮಾಡಿದಾಗ ಸದರಿ ವ್ಯಕ್ತಿ ಜಾನ ಮೈಕಲ್ ತಾನು ಲೋಕಾಯುಕ್ತ ಸಿಬ್ಬಂದಿ ಎಂದು ಹೇಳಿಕೊಂಡು ತನ್ನ ಕೆಲಸಗಳನ್ನು ಮಾಡಿಸಿಕೊಳ್ಳವುದು ಕಂಡು ಬಂದಿರುತ್ತದೆ ಹಾಗೂ ಲೋಕಾಯುಕ್ತ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡುತ್ತಿರುವುದು ಕಂಡುಬಂದ ಕಾರಣ ಸದರಿ ವ್ಯಕ್ತಿಯ ಮೇಲೆ ಐಜೂರು ಠಾಣೆಯಲ್ಲಿ ಉಪವಿಭಾಗಾಧಿಕಾರಿಯವರು ವಂಚನೆ ಪ್ರಕರಣ ದಾಖಲು ಮಾಡಿರುತ್ತಾರೆ.
ಐಜೂರು ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುತ್ತಾರೆ.