ಬೆಂಗಳೂರು: 6 ಜನರು ನಕ್ಸಲರು ಮುಖ್ಯವಾಹಿನಿಗೆ ಬರಲು ಸರ್ಕಾರದ ಮುಂದೆ ಶರಣಾಗುತ್ತಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್ ಶರಣಾಗತಿಯಾಗುವ ನಕ್ಸಲರ ವಿರುದ್ಧ ಹಲವು ಪ್ರಕರಣಗಳಿವೆ.
ಪ್ರಕರಣಗಳು ವಿಚಾರಣೆ ನಡೆಸಿ ಕ್ರಮಕೈಗೊಳ್ಳಲಿ. ಇಂದು ನಡೆಯುತ್ತಿರುವ ಶರಣಾಗತಿ ಮಲೆನಾಡು ಜಿಲ್ಲೆಗಳಾದ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತಿತರ ಕಡೆ ಶಾಂತಿ ಕದಡುವ ಸಾಧ್ಯತೆಯಿದೆ. ಇಂದು ಶರಣಾಗತಿಗೆ ನಕ್ಸಲರನ್ನು ಕರೆತರುವ ಶಾಂತಿಗಾಗಿ ನಾಗರಿಕ ವೇದಿಕೆ ಎನ್ನುವ ಸಂಘಟನೆಯ ಸದಸ್ಯರು ವಿಕ್ರಮ್ ಗೌಡ ಎನ್ಕೌಂಟರ್ ಆದಾಗ ಆತನ ಪರ ಪ್ರತಿಭಟನೆ ನಡೆಸಿದ್ದರು.ಒಟ್ಟಾರೆ ನಕ್ಸಲರ ಶರಣಾಗತಿಯಿಂದಾಗಿ ಮತ್ತೊಂದು ಹೊಸ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ಅವರ ಅಭಿಪ್ರಾಯಪಟ್ಟಿದ್ದಾರೆ.