ಬೆಂಗಳೂರು: ನಟನಂ ಫೌಂಡೇಶನ್ ನ 2024ರ ರಂಗೋತ್ಸವಮ್ ಕಾರ್ಯಕ್ರಮ ಬೆಂಗಳೂರಿನ ತೆಲುಗು ವಿಜ್ಞಾನ ಸಮಿತಿಯ ಕೃಷ್ಣ ದೇವರಾಯ ಸಭಾಂಗಣದಲ್ಲಿ ನಡೆಯಿತು.ನಟನಂ ಫೌಂಡೇಶನ್ ನ ವಿದೂಷಿ ಎಸ್. ವಿದ್ಯಾಲಕ್ಷ್ಮೀ ಅವರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಭರತನಾಟ್ಯ ಸೇರಿದಂತೆ ವಿವಿಧ ನೃತ್ಯಗಳನ್ನು ಪ್ರದರ್ಶಿಸಿ ಎಲ್ಲರ ಮನಸೂರೆಗೊಂಡರು.
ನೃತ್ಯ ತಂಡ ಎ ಮತ್ತು ನೃತ್ಯ ತಂಡ ಬಿ ಗ್ರೂಪ್ಗಳ ಮೂಲಕ ನೃತ್ಯಾಂಜಲಿ,ಗಣೇಶ ಪುಷ್ಪಾಂಜಲಿ, ಜಯ ಜಾನಕಿ ಕಾಂತ, ನಾಗಸ್ತುತಿ,ನಾರಾಯಣ ಹರಿ ಗೋವಿಂದ, ಶ್ರೀ ರಾಮ ಸರಸ್ವತಿ, ಚಂದನತಿಲ್ ಅಯ್ಯಪ್ಪ ಹಾಡು, ತಿಲಾನ ಸೇರಿ ವಿವಿಧ ರಾಗ, ತಾಳಗಳ ಮೂಲಕ ನೃತ್ಯ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.
ಪದನ್ಯಾಸ ಸ್ಕೂಲ್ ಆಪ್ ಭರತ ನಾಟ್ಯಂನ ಸಂಸ್ಥಾಪಕ ನಿರ್ದೇಶಕಿ ಗುರು ಶುಭಗಿ ಭಲೇರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಟನಂ ಫೌಂಡೇಶನ್ ವಿದ್ಯಾರ್ಥಿಗಳಲ್ಲಿ ನೃತ್ಯ ಕಲೆಯ ಪ್ರತಿಭಾವಂತಿಕೆಯನ್ನು ಜೀವಂತವಾಗಿ ಇಡುವ ಕಾರ್ಯವನ್ನು ನಿರ್ವಹಿಸುತ್ತಿದೆ.ಒಂದೊಂದು ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ದೇವಲೋಕದಿಂದ ಧರೆಗಳಿದ ಅಪ್ಸರೆಯಂತೆ ಕಂಗೋಳಿಸುತ್ತಿದ್ದರು ಎಂದು ಪ್ರಶಂಸಿದರು.