ಬೆಂಗಳೂರು: ಸಿನಿಮಾ ನಟನ ಜೊತೆ ಸೇರಿ ದಂಪತಿ ಕೋಟಿ ಕೋಟಿ ರೂ. ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಐಶ್ವರ್ಯ ಗೌಡ @ ನವ್ಯಶ್ರೀ ಹಾಗೂ ಹರೀಶ್ ಕೆ ಎಂಬ ದಂಪತಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಚಿನ್ನದಂಗಡಿ ಮಾಲೀಕರಾದ ವನೀತಾ ಎಸ್ ಹೈತಾಲ್ ಎಂಬುವರಿಗೆ ವಂಚನೆ ಮಾಡಲಾಗಿದೆ.
ಹಂತ ಹಂತವಾಗಿ 14ಕೆಜಿ 600ಗ್ರಾಂ ಚಿನ್ನಾಭರಣ ವಂಚನೆ ಮಾಡಿದ್ದು, ಡಿಕೆ ಸುರೇಶ್ ಧ್ವನಿಯಲ್ಲಿ ಮಾತನಾಡಿದ್ದ ನಟ ಧರ್ಮೇಂದ್ರ ಚಿನ್ನಾಭರಣ ನೀಡಿದ್ದ ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.2023ರಲ್ಲಿ ಚಿನ್ನ ಖರೀದಿ ಮಾಡಿರುವ ದಂಪತಿ.. ನಾನು ಡಿಕೆ ಸುರೇಶ್ ತಂಗಿ ನನಗೆ ಹಲವು ರಾಜಕಾರಣಿಗಳ ಕಾಂಟ್ಯಾಕ್ಟ್ ಇದೆ ಎಂದು ನಂಬಿಸಿದ್ದ ರು. ರಾಜಕಾರಣಿಗಳ ಮೂಲಕ ಹೆಚ್ಚಿನ ಚಿನ್ನದ ವ್ಯಾಪಾರ ಮಾಡಿಸ್ತೀನಿ. ಮ ುಂದಿನ ದಿನಗಳಲ್ಲಿ ರಾಜಕಾರಣಿಗಳ ಕಾಂಟ್ಯಾಕ್ಟ್ ಮಾಡಿಸಿಕೊಡ್ತೀವಿ ಅಂತಾ ನಂಬಿಸಿದ್ದರು.
ಅಲ್ಲದೇ ನಟ ಧರ್ಮೇಂದ್ರ ಮೂಲಕ ಕರೆ ಮಾಡಿಸಿ ಡಿ ಕೆ ಸುರೇಶ್ ರಂತೆ ಮಾತಾಡಿಸಿದ್ದರು. ಹಣ ಕೊಡದೆ ಆಟ ಆಡಿಸಿದಾಗ ಆರೋಪಿಗಳ ಮೇಲೆ ಅನುಮಾನ ಉಂಟಾಗಿದೆ.ನಂತರ ಮೋಸ ಹೋಗಿರೋದು ಗೊತ್ತಾಗಿ ವನಿತಾ ಎಂಬುವರು ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.