ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರಿಡಾಂಗಣದಲ್ಲಿ ಪವರ್ ಸ್ಟೇಪ್ಸ್ 5 ಕಿ.ಮೀ. ಮ್ಯಾರಥಾನ್ ಗೆ ಚಾಲನೆ ನೀಡಿದ ಶಾಸಕ ಧೀರಜ್ ಮುನಿರಾಜು.ದಿ// ಡಾ.ಪುನೀತ್ ರಾಜ್ ಕುಮಾರ್
ರವರ 50ನೇ ವರ್ಷದ ಹುಟ್ಟು ಹಬ್ಬದಅಂಗವಾಗಿ 5 ಕಿ.ಮೀ ಮ್ಯಾರಥಾನ್ ಓಟವನ್ನ ಪುನೀತ್ ರಾಜ್ ಕುಮಾರ್ಅಭಿಮಾನಿಗಳ ಬಳಗವತಿಯಿಂದ ಆಯೋಜಿಸ ಲಾಗಿತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿ ಮಾತನಾಡಿದ ಅವರು ಪುನೀತ್ ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ದೊಡ್ಡ ಪ್ರಮಾಣದ ಅಭಿಮಾನಿಗಳನ್ನ ಹೊಂದಿದ್ದವರು, ಅವರು ದಿವಂಗತರಾದ ನಂತರವೂ ಸಹ ಅವರ ಹೆಸರು ಅಜರಾಮರ,ಯಾವುದೇ ಪ್ರಚಾರವಿಲ್ಲದೆ ಅವರು ಕೈಗೊಂಡ ಕಾರ್ಯವೈಖರಿಗಳನ್ನ ಯುವ ಸಮೂಹ ಅಷ್ಟೇ ಅಲ್ಲದೇ ವಯಸ್ಸಿನವರಿಂದಲೂ ಆರಾಧಿಸಲಾಗುತ್ತಿದೆ.
ಈ ಕಾರ್ಯಕ್ರಮವನ್ನು ಆಯೋಜಿಸಿರುವ ಯುವಕರು ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನ ಆಯೋಜಿಸಲಿ ಎಂದರು.ಈ ಓಟದಲ್ಲಿ ಮಕ್ಕಳು, ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪುನೀತ್ ಅಭಿಮಾನಿಗಳು ಭಾಗವಹಿಸಿದ್ದರು.ಭಗತ್ ಸಿಂಗ್ ಕ್ರೀಡಾಂಗಣದಿಂದ ಪ್ರಾರಂಭವಾಗಿ ಬಸವನ ವೃತ್ತದ ಮೂಲಕ ಡಿ.ಕ್ರಾಸ್ ನಿಂದ ತಾಲೂಕು ಕಚೇರಿ ವೃತ್ತದ ಮಾರ್ಗವಾಗಿ ಭಗತ್ ಸಿಂಗ್ ಕ್ರೀಡಾಂಗಣ ತಲುಪಿದರು.ಓಟಕ್ಕೂ ಮುನ್ನ ಪುನೀತ್ ರಾಜ್ ಕುಮಾರ್ ಸಿನಿಮಾದ ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಮಕ್ಕಳು ಮಹಿಳೆಯರು.