ಬೆಂಗಳೂರು: ಸರಿಗಮ ವಿಜಿ ಎಂದೇ ಪ್ರಖ್ಯಾತರಾಗಿದ್ದ ನಟ ಸರಿಗಮ ವಿಜಿ(76) ಇಂದು ಬೆಳಿಗ್ಗೆ 9.45ಕ್ಕೆ ನಿಧನರಾಗಿದ್ದಾರೆ.ಇತ್ತೀಚೆಗೆ ಅನಾರೋಗ್ಯ ಪೀಡಿತ ರಾಗಿದ್ದ ಅವರು ಯಶವಂತಪುರ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಹಾಲಕ್ಷ್ಮಿಲೇಔಟ್ನಲ್ಲಿರುವ ಅವರ ನಿವಾಸದಲ್ಲಿ ಇಂದು ಮಧ್ಯಾಹ್ನದಿಂದ ಅಭಿಮಾನಿಗಳ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಚಾಮರಾಜಪೇಟೆಯ ಟಿಆರ್ಮಿಲ್ನ ಬಳಿಯ ಚಿತಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.