ದೆಹಲಿ: ದೇಶದ ಜನ ನಮಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ನಮ್ಮ ಧ್ವನಿ ಅಡಿಗಿಸಲಾಗಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಸಂಸತ್ ಭವನದ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ನಲ್ಲಿ ಕೆಲ ಪಕ್ಷಗಳವರು ನಕಾರಾತ್ಮಕ ವಿಷಯಗಳಬಗ್ಗೆ ಚರ್ಚೆ ಮಾಡಿ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ.
ನಮಗೆ ಸ್ಪಷ್ಟ ಬಹುಮತವಿದುದ, ನಮ್ಮ ಧ್ವನಿಯನ್ನು ಅಡಗಿಸಲಾಗಲ್ಲ ಎಂದಿದ್ದಾರೆ.ಸುಗಮ ಕಲಾಪಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿರುವ ಅವರು, ಸುಗಮ ಕಲಾಪ ನಡೆಯಲು ದೇಶದ ಜನ ನಿರೀಕ್ಷೆ ಮಾಡುತ್ತಾರೆ. 60 ವರ್ಷಗಳ ನಂತರ ಮೂರನೇ ಅವಧಿಗೆ ಸರ್ಕಾರ ಆಯ್ಕೆಯಾಗಿದೆ. ಜನ ಸೇವೆ ಮಾಡಲು ಮತ್ತಷ್ಟು ಅವಕಾಶ ದೊರಕಿದೆ. ಸಿಕ್ಕಿರುವ ಅವಕಾಶವನ್ನು ದೇಶದ ಅಬಿವೃದ್ಧಿಗಾಗಿ ಕೆಲಸ ಮಾಡುತ್ತೇವೆ. ವಿಕಾಸ ಭಾರತದ ಅಡಿ ಮನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದಿರುವ ಅವರು ನಾಳೆ ಕೇಂದ್ರ ಬಜೆಟ್ ಮಂಡನೆಯಾಗಲಿದೆ ಎಂದು ತಿಳಿಸಿದ್ದಾರೆ.
ನಾಳೆ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಮುಂದಿನ ಐದು ವರ್ಷಗಳ ಮಾರ್ಗಸೂಚಿಯನ್ನು ರೂಪಿಸಲಿದೆ ಎಂದು ಹೇಳಿದ್ದಾರೆ. ನಾನು ದೇಶದ ಜನರಿಗೆ ಭರವಸೆಗಳನ್ನು ನೀಡುತ್ತಿದ್ದೇನೆ ಮತ್ತು ಇದನ್ನು ನಾನು ಜಾರಿಗೆ ತರುತ್ತೇನೆ. ಇದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಈ ಬಜೆಟ್ ಅಮೃತ ಕಾಲಕ್ಕೆ ಮಹತ್ವದ ಬಜೆಟ್ ಆಗಿದೆ. ಇಂದಿನ ಬಜೆಟ್ ನಮ್ಮ ಅಧಿಕಾರದ ಮುಂದಿನ 5 ವರ್ಷಗಳ ದಿಕ್ಕನ್ನು ನಿರ್ಧರಿಸುತ್ತದೆ. ಈ ಬಜೆಟ್ ನಮ್ಮ ವಿಕಸಿತ ಭಾರತದ ಕನಸಿಗೆ ಬುನಾದಿಯಾಗಿದೆ ಎಂದು ಹೇಳಿದ್ದಾರೆ.