ಕವಿತೆಯೊಂದನ್ನು ಓದಿದಾಗ ಅದಕ್ಕೆ ಸೂಕ್ತವಾದ ರಾಗ ಸಂಯೋಜಿಸಿ ಹಾಡಾಗಿಸುವುದು ತೀರಾ ಸಾಮಾನ್ಯ ಆದರೆ ಈ ಹಾಡು ಹುಟ್ಟಿದ ರೀತಿಯೇ ಬೇರೆ.. ಫೇಸ್ ಬುಕ್ ನ ವಿವಿಧ ಪೋಸ್ಟ್ ಗಳನ್ನ ನೋಡ್ತಾ ಇರುವಾಗ ಕವಿ ಶ್ರೀನಿವಾಸ ನಾಯಕ್ ಅವರ ಕನ್ನಡದ ಸಮೂಹ ಗೀತೆಯೊಂದನ್ನು ಕೇಳಿ ನಾನೂ ಸಹ ಕನ್ನಡದ ಗೀತೆಯೊಂದನ್ನು ಯಾಕೆ ಪ್ರಯತ್ನಿಸಬಾರದು ಅಂತ ಒಂದು ಯೋಚನೆ ಮೂಡಿತು, ಆಗಲೇ ಒಂದು ಟ್ಯೂನ್ ಹೊಳೆಯಿತು., ಅದನ್ನು ಹಾಗೆಯೇ ರೆಕಾರ್ಡ್ ಮಾಡಿಕೊಂಡು ಯಾರಾದರೂ ಟ್ಯೂನ್ ಗೆ ತಕ್ಕಂತೆ ಸಾಹಿತ್ಯ ರಚಿಸಿ ಕೊಡಬಹುದಾ ಅಂತ ಯೋಚಿಸುತ್ತಲೇ ಇರುವಾಗ ಕಣ್ಣಿಗೆ ಬಿದ್ದದ್ದು ಅಶ್ವಿನಿ ಕೋಡಿಬೈಲು ಅವರು. ಅಷ್ಟಾಗಿ ಪರಿಚಯವಿಲ್ಲ ಆದರೂ ಒಮ್ಮೆ ಕೇಳುವುದರಲ್ಲಿ ತಪ್ಪೇನಿಲ್ಲ.. ಅಂದುಕೊಳ್ತಾ ನನ್ನ ಟ್ಯೂನ್ ಕೇಳಿಸಿದೆ.
ಈ ಥರದ ಪ್ರಯತ್ನ ಮಾಡಿಲ್ಲ ಆದ್ರೂ ಪ್ರಯತ್ನಿಸುವೆ ಅಂತ ಹೇಳಿದವರು., ಒಂದರ್ಧ ಗಂಟೆಯಲ್ಲೇ ಚಂದದ ಅರ್ಥಪೂರ್ಣ ಕವಿತೆಯನ್ನ ಎದುರಿಗಿಟ್ಟರು, ಮುಖಪುಟದ ಮಿತ್ರರಾದ ಪಾಣಿನಿ ದೇರಾಜೇ ಅವರು ಹಿತ ಮಿತವಾದ ಸಂಗೀತವನ್ನು ಒದಗಿಸಿದರೆ, ರಂಗ ಸಂಗೀತ ನಿರ್ದೇಶಕರಾದ ಗಿರೀಶ್ ತಂತ್ರಿ ಅವರು ರೆಕಾರ್ಡಿಂಗ್ ಹಾಗೂ ತಾಂತ್ರಿಕ ಸಲಹೆಗಳನ್ನು ಕೊಟ್ಟರು. ಕವಿಮಿತ್ರರಾದ ದಿಲೀಪ್ ಹೆಗಡೆ ಅವರು ಆಕರ್ಷಕ ದೃಶ್ಯ ಸಂಕಲನ ಮಾಡಿ ಕೊಟ್ಟಿದ್ದಾರೆ. ಸಹ ಗಾಯನದಲ್ಲಿ ಗೆಳತಿಯರಾದ ಮೈಥಿಲಿ ತೇಜಸ್ವಿ, ದಿವ್ಯಾ ವೆಂಕಟೇಶ್ ಹಾಗೂ ಅಕ್ಷಯಾ ಭಾಗವತ್ ಇವರೆಲ್ಲಾ ಕೈಜೋಡಿಸಿದ್ದಾರೆ. ಆಕಸ್ಮಿಕವಾಗಿ ಪರಿಚಯವಾದ ಸುಪ್ರಸಿದ್ಧ ಜಾದೂಗಾರರಾದ ತೇಜಸ್ವಿ ಶಂಕರ್ ಅವರು ವಿಡಿಯೋ ಸಹಕಾರವನ್ನು ನೀಡಿದ್ದಾರೆ. ವಿಶೇಷವೆಂದರೆ ಈ ಹಾಡಿನ ಹಿನ್ನೆಲೆಯಲ್ಲಿ ಸಹಕರಿಸಿದವರೆಲ್ಲರೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಭಾಷಾಭಿಮಾನದಿಂದ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ನಿಮ್ಮೆಲ್ಲರ ಸಹಕಾರದಿಂದ ಹಾಡು ಗೆದ್ದಿದೆ. ಹೊಸ ಕನ್ನಡ ಹಾಡುಗಳ ರಚನೆ ನಿರಂತರವಾಗಿ ಮುಂದುವರಿಯಲಿದೆ ನಿಮ್ಮ ಬಿಡುವಿನಲ್ಲಿ ರಮ್ಯ ರಾಗ ಯೂಟ್ಯೂಬ್ ಚಾನಲ್ಗೆ ಭೇಟಿಕೊಟ್ಟು ಚಂದಾದಾರರಾಗಿ.
ರಾಗ ಸಂಯೋಜಕಿ: ರಮ್ಯ ವಿನಯ್