ಭಾರತ ಮತ್ತು ಪಾಕಿಸ್ತಾನ್ ಈವರೆಗೆ ಒಟ್ಟು 208 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಪಾಕಿಸ್ತಾನ್ ತಂಡ 88 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ಭಾರತ ತಂಡ 76 ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ಕಳೆದೊಂದು ದಶಕದಿಂದ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ ಪಾರುಪತ್ಯ ಮರೆಯುತ್ತಾ ಬರುತ್ತಿದೆ. ಹೀಗಾಗಿಯೇ ಉಭಯ ತಂಡಗಳ ನಡುವಣ ದ್ವಿಪಕ್ಷೀಯ ಸರಣಿ ಮೂಲಕ ಯಾರು ಬಲಿಷ್ಠ ಎಂಬುದು ನಿರ್ಧಾರವಾಗಲಿ ಎಂದು ಸಕ್ಲೇನ್ ಮುಷ್ತಾಕ್ ಆಗ್ರಹಿಸಿದ್ದಾರೆ.
ಪಾಕಿಸ್ತಾನ್ ವಿರುದ್ಧದ ಟೀಮ್ ಇಂಡಿಯಾದ ಪಾರುಪತ್ಯ ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರೆದಿದೆ.ಚಾಂಪಿಯನ್ಸ್ ಟ್ರೋಫಿಯಲ್ಲಿನ ಟೀಮ್ ಇಂಡಿಯಾದ ಉತ್ತಮ ಪ್ರದರ್ಶನದ ಬಳಿಕ ಮಾತನಾಡಿದ ಪಾಕ್ ತಂಡದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್, ನಾವು ರಾಜಕೀಯ ವಿಷಯಗಳನ್ನು ಬದಿಗಿಟ್ಟರೆ, ಅವರ ಆಟಗಾರರು ತುಂಬಾ ಒಳ್ಳೆಯವರು. ಅಲ್ಲದೆ ಅವರು ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಆದರೆ ಅವರು ಪಾಕಿಸ್ತಾನ್ ವಿರುದ್ಧ ಹೆಚ್ಚಿನ ಪಂದ್ಯಗಳನ್ನಾಡದಿರುವುದೇ ಸಮಸ್ಯೆಯಾಗಿರುವುದು.
ಇದರ ಹೊರತಾಗಿ ಒಂದು ಪಂದ್ಯದ ಫಲಿತಾಂಶದಿಂದ ಯಾರು ಉತ್ತಮರು ಎಂದು ಅಳೆಯುವುದು ಸರಿಯಲ್ಲ. ನನ್ನ ಪ್ರಕಾರ, ಎರಡೂ ತಂಡಗಳು ಮೂರು ಸ್ವರೂಪಗಳಲ್ಲೂ ಕನಿಷ್ಠ ಹತ್ತತ್ತು ಪಂದ್ಯಗಳನ್ನಾಡಲಿ. ಇದರಿಂದ ಯಾವ ತಂಡ ಬಲಿಷ್ಠ ಎಂಬುದು ಗೊತ್ತಾಗುತ್ತದೆ ಎಂದು ಸಕ್ಲೇನ್ ಮುಷ್ತಾಕ್ 24 ನ್ಯೂಸ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.