ಬೊಮ್ಮನಹಳ್ಳಿ: ನಮ್ಮ ಸಂವಿಧಾನ ಮತ್ತು ನಮ್ಮ ಹಕ್ಕುಗಳ ಬಗ್ಗೆ ಅರಿವು ಅವಶ್ಯಕ ಎಂಬುದಾಗಿ ಬಹುಜನ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ದಲಿತ ಸಂತೋಷ ತಿಳಿಸಿದರುಅವರು ಸಿಂಗಸಂದ್ರವಾರ್ಡಿನ ಬಹುಜನ ದಲಿತ ಸಂಘರ್ಷ ಸಮಿತಿಯಿಂದ ಸಂವಿಧಾನ ಪೀಠಿಕೆ ಸಮರ್ಪಣಾ ದಿನಾಚರಣೆಯ ಅಂಗ
ವಾಗಿ ಬಹುಜನ ದಲಿತ ಸಂಘರ್ಷ ಸಮಿತಿಯರಾಜ್ಯಾಧ್ಯಕ್ಷರಾದ ಆರ್ ಎಂ ರಮೇಶ್ ರವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ ಶಾಲಾಮಕ್ಕಳಿಗೆ ಸಂವಿಧಾನ ಓದು ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ಪೀಠಿಕೆ ಹಾಗೂ ಪುಸ್ತಕ ವಿತರಣೆ:- ನಮ್ಮ ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನ ಪೀಠಿಕೆಯ ಬಗ್ಗೆ ಇನ್ನೂ ಕೆಲವರಿಗೆ ಸರಿಯಾದ ಅರಿವು ಇಲ್ಲದಾಗಿದೆ ಅದಕ್ಕಾಗಿ ಸಿಂಗಸಂದ್ರ ವಾರ್ಡಿನ ಸುತ್ತಮುತ್ತಲಿನ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆ ಮತ್ತು ಸಂವಿಧಾನ ಪುಸ್ತಕ ವಿತರಣೆ ಮಾಡುತ್ತ ಇದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಿವಿ ಎಂದರು.
ಇದೇ ಸಂದರ್ಭದಲ್ಲಿ ಬಹುಜನ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಆರ್ ಎಂ ರಮೇಶ್ ಮಾತನಾಡುತ್ತ ನಮ್ಮ ಸಂಘಟನೆಯಲ್ಲಿ ದಲಿತ್ ಸಂತೋಷ್ ಅವರು ಬಹಳ ಕ್ರಿಯಾಶೀಲರಾಗಿ ಮತ್ತು ವಿಶಿಷ್ಟವಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಈ ನಿಟ್ಟಿನಲ್ಲಿ ಡಾ.ಅಂಬೇಡ್ಕರ್ ಅವರ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಹೆಚ್ಚು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು. ಸಂಘಟನೆಯ ಮಹಿಳಾ ನಾಯಕಿ ಚಂದ್ರಮ್ಮನವರ ನೇತೃತ್ವದಲ್ಲಿ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದರು, ಕಾರ್ಯಕ್ರಮದಲ್ಲಿ ಮಹದೇವ್, ಕುಮರ್ ರೆಡ್ಡಿ, ಆನಂದ್, ದೇವರಾಜ್, ಸಿದ್ದಾರ್ಥ್ , ಶಶಿ, ಮಹೇಶ್, ಸುರೇಂದ್ರ, ರಘು, ಸಂದೀಪ್ ಹಾಗೂ ಸರ್ಕಾರಿ ಶಾಲೆ ಶಿಕ್ಷಕರು ಹಾಗೂ ಬಿಬಿಎಂಪಿ ಪೌರಕಾರ್ಮಿಕರು, ಸಿಂಗಸಂದ್ರ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.