ಬೆಂಗಳೂರು: ನಮ್ಮ ಸಾಂಪ್ರದಾಯಿಕ ಕಲೆಗಳಾದ ಜಾನಪದ,ನೃತ್ಯ,ಸಂಗೀತ ಮುಂತಾದವುಗಳನ್ನು ಉಳಿಸಿ ಬೆಳಸಿ ಮುಂದಿನ ಪೀಳಿಗೆಗೆ ಹಸ್ತಾಂತರಸ ಬೇಕಾದ ಹೊಣಗಾರಿಕೆ ಇಂದಿನ ಯುವ ಪೀಳಿಗೆ ಮೇಲಿದೆ ಎಂದು ಹಿರಿಯ ಪತ್ರಕರ್ತರಾದ ಲೇಪಾಕ್ಷಿ ಸಂತೋಷರಾವ್ ತಿಳಿಸಿದರು.
ಭಾನುವಾರ ಬೆಂಗುಳೂರು ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ನಾಟ್ಯದೇಗುಲ ಪಬ್ಲಿಕ್ ಟ್ರಸ್ಟ್ ಹಾಗೂ ಕನ್ನಡ ಸಂಸ್ಕøತಿ ಇಲಾಖೆಯ ಸಹಯೋಗದಿಂದ ನಡೆದ ನೃತ್ಯಾಂಜಲಿ 21ನೇ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಪಾಶ್ಚಾತ್ಯ ಸಂಗೀತದ ಹಾವಳಿಗೆ ನಶಿಸಿ ಹೋಗುತ್ತಿರುವ ನಮ್ಮ ಸಾಂಪ್ರದಾಯಿಕ ಕಲೆಗಳನ್ನು ಉಳಿಸುವಲ್ಲಿ ಸ್ವಾಮಿ ರವರ ಪ್ರಯತ್ನ ಅಭಿನಂದನಾರ್ಹ ಎಂದರು.
ಮತ್ತೋರ್ವ ಅತಿಥಿ ಅರ್ತಾ ನೃತ್ಯ ಕಲಾಮಂದಿರದ ಶ್ರೀಮತಿ ಶ್ಮಿತಾ ಶ್ರೀಪತಿ ರವರು ಮಾತನಾಡಿ ನಮ್ಮ ಸಾಂಪ್ರದಾಯ ಕಲೆಗಳನ್ನು ಉಳಿಸಲು ನಾವೆಲ್ಲಾ ಪ್ರಯತ್ನ ಪಡಬೇಕು.ವಿಶೇಷವಾಗಿ ಪೋಷಕರು ತಮ್ಮ ಮಕ್ಕಳಿಗೆ ಕಲೆಗಳ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.ವಿನಾಯಕನ ಪ್ರಾರ್ಥನೆ ಯೋದಿಗೆ ಕಾರ್ಯಕ್ರಮ ಪ್ರಾರಂಭ ವಾಯಿತು.
ಪುಠಾಣಿ ಮಕ್ಕಳ ನೃತ್ಯ ಪ್ರದರ್ಶನ ತುಂಬಿದ ಸಭಾಂಗಣದಲ್ಲಿನ ಸಭಿಕರ ಮನಸೂರಗೊಂಡಿತು. ಕಾರ್ಯಕ್ರಮದ ಅಂತಿಮದಲ್ಲಿ ರಾವಣ ನೃತ್ಯ ರೂಪಕದಲ್ಲಿ ಸ್ವಾಮಿ ರವರು ಶಿವನಾಗಿ ಅಭಿನಯದ ನೃತ್ಯ, ರಾವಣನಿಗೆ ಅತ್ಮಲಿಂಗ ನೀಡುವ ಸನ್ನಿವೇಶ ನಯನ ಮನೋಹರ ವಾಗಿತ್ತು.ಸುಮಾರು 21 ವಿವಿಧ ನೃತ್ಯ ಕಲಾತಂಡಗಳಿಂದ ಪ್ರದರ್ಶಿತವಾದ ನೃತ್ಯಗಳು ನೃತ್ಯ ಕಲಾವಿದರ ಅಭಿನಯ ನೋಡುಗರಿಗೆ ನೇತ್ರಾನಂದ ಮಾಡಿತು.
ಮೋದಲು ವಿನಾಯಕನ ಪ್ರಾರ್ಥನೆಯಲ್ಲಿ ಯಕ್ಷಗಾನ, ಭರತನಾಟ್ಯ, ಮೋಹಿನಿಅಟ್ಟಂ, ಕೂಚಿಪೂಡಿ, ಮುಂತಾದ ನೃತ್ಯಗಳನ್ನು ಸಂಭಂಧಿತ ಉಡುಪು ಗಳೋಂದಿಗೆ ಮಕ್ಕಳು ಪ್ರದರ್ಶನ ಮಾಡಿದರು. ಯಶೋದ ಕೃಷ್ಣರ ಸಂವಾದದಲ್ಲಿ ಗೋವುಗಳನ್ನು ಮೇಯಿಸಲು ಕಾಡಿಗೆ ಹೋಗಬೇಕೆಂದು ಕೃಷ್ಣ ಪಟ್ಟು ಹಿಡಿದಾಗ ಯಶೋದೆ ನಯ, ಭಯದಿಂದ ಬೇಡವೆಂದು ಹೇಳಿದಾಗ ಕೃಷ್ಣ ಆಕೆಯ ಭಯವನ್ನು ದೂರಮಾಡಿ ಹೇಳುವ ನೃತ್ಯ ಬಹು ಸುಂದರವಾಗಿತ್ತು.
ಪುರಂಧರ ದಾಸರ ಜಗನ್ಮೋಹನದಲ್ಲಿ ಕೃಷ್ಣ,ಆಯೋಜಕರಾದ ಸ್ವಾಮಿ ರವರು ತಮ್ಮ ಗುರುಗಳಿಗೆ ಭಕ್ತಿ ಯನ್ನು ತೋರ್ಪಡಿಸಿ ಮಾಡಿದ ಗುರುಭಕ್ತಿ ನೃತ್ಯ,ಆನಂದ ತಾಂಡವ, ಓಂಕಾರನಾದ ಶಿವಸ್ತುತಿ,ಶಾರದಾ ವಿದ್ಯಾಲಯದ ಮಕ್ಕಳು ಪರಿಸರ ರಕ್ಷಣೆ ಬಗ್ಗೆ ನೃತ್ಯ ಪ್ರದರ್ಶನ, ಡಿವಿ ಗುಂಡಪ್ಪ ನವರ ಬೇಲೂರು ಚೆನ್ನ ಕೇಶವನ ದೇಗುಲದಲ್ಲಿನ ಮದನಿಕೆಗಳು, ಶಾಂತಲಾ ಭಂಗಿಯ ನೃತ್ಯಗಳ ಮುಂತಾದವುಗಳನ್ನು ಮಕ್ಕಳು ಪ್ರದರ್ಶಿಸಿದರು.
ಇಂದಿನ ನೃತ್ಯ ಪ್ರದರ್ಶನದಲ್ಲಿ ಗೌತಮಿ, ಶಿರೀಷ,ರಾಜೇಶ್,ಪಲ್ಲವಿ, ಕೀರ್ತನ, ಮಣೇಶ್, ಪ್ರೇರಣ, ರಕ್ಷ, ಜಾನವಿ, ಅಮೃತ, ಶಾರದಾ ವಿದ್ಯಾಲಯದ ಮಕ್ಕಳ ತಂಡಗಳು ನೃತ್ಯ ಪ್ರದರ್ಶನ ಮಾಡಿದರು. ಷಡಕ್ಷರಿ ರವರ ವಿವರಣಾತ್ಮಕ ನಿರೂಪಣೆ ಯಲ್ಲಿ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿತು. ನೃತ್ಯ ಗುರುಗಳಾದ ಕೋಲಾರು ರಂಏಶ್ ರವರು ಹಾಜರಿದ್ದರು.