ಬೆಂಗಳೂರಿನ ಮೂಡಲ್ ಪಾಳ್ಯ ವಾರ್ಡ್, ಕಲ್ಯಾಣ ನಗರದಲ್ಲಿರುವ ಜ್ಞಾನಸೌಧ ಸಭಾಂಗಣದಲ್ಲಿ ನವಭಾರತ ಉದಯ ಪ್ರತಿಷ್ಠಾನ ನವೆಂಬರ್ 30, 2024 ರಂದು ಶನಿವಾರ ಸಂಜೆ 4 ಗಂಟೆಯಿಂದ 8 ಗಂಟೆವರೆಗೂ ಕರ್ನಾಟಕ ರಾಜ್ಯೋತ್ಸವ ಮತ್ತು ಸಾಂಸ್ಕೃತಿಕ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ ಮತ್ತು ಗುರು ಪಂಚಾಕ್ಷರಿ ಸಂಗೀತ ಶಾಲೆ ಶಿಕ್ಷಕ ರಾಜೇಶ್ ಹಳೆಮನಿ ಯವರಿಂದ ಗಾಯನ, ಅಪ್ಪು ಡ್ಯಾನ್ಸ್ ಅಕಾಡೆಮಿಯ ಡ್ಯಾನ್ಸ್ ಮಾಸ್ಟರ್ ರಾಮಕೃಷ್ಣ ಕೋರಿಯೋಗ್ರಾಫ್ ಮಾಡಿರುವ ಮಕ್ಕಳ ನೃತ್ಯ, ರಸಜ್ಞ ಅಕಾಡೆಮಿಯ, ಕುಮಾರಿ ನಿಸರ್ಗ ಟಿ ಜೆ ರವರಿಂದ ಕುಚಿಪುಡಿ ನೃತ್ಯ ಕುವೆಂಪು ರಚನೆಯ ಸೂರ್ಯೋದಯ ಚಂದ್ರೋದಯ ಭಾವಗೀತೆಗೆ ನೃತ್ಯ ಮಾಡಿದರು.
ಅಭಿನಯ ರಂಗ ತಂಡದಿಂದ ಕೈಲಾಸದ ಬಾಗಿಲಲ್ಲಿ ಆತ್ಮಗಳು (ಅತ್ಮ ಹತ್ಯೆ ತಡೆಯಿರಿ ಜೀವ ಉಳಿಸಿರಿ) ನಾಟಕ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರು ಆಗಮಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಶಾಂತಕುಮಾರಿ ಆರ್ ರವಿಕುಮಾರ್ ಮಾಜಿ ಮಹಾಪೌರರು ವಹಿಸಿಕೊಂಡಿದ್ದರು.
ಅತಿಥಿಗಳಾಗಿ ನಾಗರಬಾವಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ ಎನ್ ಬೈರಪ್ಪ, ನಾಗರಬಾವಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀ ಯೋಗೇಶ್ ಎಂ. ನಾಗರಬಾವಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀಮತಿ ಹೇಮಲತ, ಕರ್ನಾಟಕ ರಾಜ್ಯ ಸಿರಿಗನ್ನಡ ನುಡಿ ಬಳಗ ಅಧ್ಯಕ್ಷರಾದ ವಿ ಎಚ್ ಲಕ್ಷಾಣಿ ಮತ್ತು ಬಿಬಿಎಂಪಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಲಕ್ಷಣ ಸಿಂಗ್ ಎನ್, ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜು ಕಸ್ತೂರಿಬಾನಗರದ ಪ್ರಾಂಶುಪಾಲ ಡಾ. ಶಿವಾಜಿ, ಬಿಬಿಎಂಪಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾರಾದ ನಾಗಪ್ಪ ಮತ್ತು ವಿಶೇಷ ಆಹ್ವಾನಿತರು ಉಪಸ್ಥಿತಿರಿದ್ದರು.
ಕಾರ್ಯಕ್ರಮಕ್ಕೆ ಮುಂಚೆ ಸುಗಮ ಸಂಗೀತ ಕಾರ್ಯಕ್ರಮವನ್ನು ಏರ್ಪಡಿ ಸಲಾಗಿತ್ತು. ಆನಂತರ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಿದ್ದು, ಶಾಸಕರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕನ್ನಡ ಕಣ್ಮಣಿ ಪ್ರಶಸ್ತಿ ಪುರಸ್ಕೃತರಾದ ಕುಮಾರಿ ಅನುಷ್ಯ ಕರಿಬಸಯ್ಯ ಹಿರೇಮಠ ಅವರು ಹಾವೇರಿಯಿಂದ ಆಗಮಿಸಿದರು.
ಈಗಾಗಲೇ ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಸಿದ್ಧಿಯಾಗಿರುವ ಅವರು ಕನ್ನಡ ನಾಡಿನ ಮಹಿಮೆ ಕನ್ನಡ ಭಾಷೆಯ ಮಹತ್ವ ಅರಳುಹುರಿದಂತೆ ಸುಲಲಿತವಾಗಿ ಸುಂದರವಾದ ಪದಗಳ ಮೂಲಕ ಮಾತನಾಡಿ ರಂಜಿಸಿದರು. ಗೃಹಲಕ್ಷ್ಮಿ ಹಣದಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮಲ್ಲಪ್ಪ ಭೀಮಪ್ಪ ಮೇಟಿ ಅವರಿಗೆ ಕನ್ನಡ ಕಣ್ಮಣಿ ಪ್ರಶಸ್ತಿಯನ್ನು ನೀಡಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚುಗೊಳಿಸಿದಂತಾಗಿದೆ.
ಕನ್ನಡ ಕಣ್ಮಣಿ ಪ್ರಶಸ್ತಿಯನ್ನು ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಸಾಧಕರನ್ನು ಗುರುತಿಸಿ ಆಯ್ಕೆಗೊಮಡ ಟಿ.ಆರ್.ದೊಡ್ಡಿ, ಮುಕ್ತುಮಸಾಬ ಎಂ. ನಾಯಕ, ಮಾಯಣ್ಣ ಸ್ವಾಮಿ ಕಿರಂಗೂರು, ಶ್ರೀ ದ್ವಾರನಹಳ್ಳಿ ದೇವರಾಜ, ಡಾ ಲಕ್ಷ್ಮಿ ನರಸಮ್ಮ, ಡಾ ಜಾನಂದ ಬ. ಸೊಗಲನ್ನವರ, ಮಲ್ಲಪ್ಪ ಬಸಪ್ಪ ಕರಡಿ, ಶ್ರೀ ರಮೇಶ್ ಸಿ ಹೊಸದೊಡ್ಡಿ, ಶ್ರೀ ಯು ಸಿರಾಜ್ ಅಹಮದ್ ಸೊರಬ. ಪ್ರೊ . ವಿಶ್ವಾರಾಧ್ಯ, ಡಾ. ವೆಂಕಟೇಶ್ ಟಿ ಎಸ್. ಶ್ರೀ ನಂಜುಂಡಸ್ವಾಮಿ ಎ ಎಸ್ ಇವರನ್ನು ಶಾಸಕ ಎಂ ಕೃಷ್ಣಪ್ಪನವರು ಮಾಜಿ ಮಹಾಪೌರರಾದ ಡಾ. ಶಾಂತಕುಮಾರಿ ಆರ್ ರವಿಕುಮಾರ್ ರವರರು ಕನ್ನಡ ಕಣ್ಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಬಳಿಕ ಶಾಸಕ ಎಂ ಕೃಷ್ಣಪ್ಪರವರು, 2024ರಲ್ಲಿ ರಾಜ್ಯೋತ್ಸವನ್ನು ರಾಜ್ಯದಾಂತ ಏರ್ಪಡಿಸಿದೇವೆ.
ಕರ್ನಾಟಕ ವಿಶಾಲವಾದ ನಾಡು ಸ್ವಾತತಂತ್ರ್ಯ ಪೂರ್ವದಲ್ಲಿ ಹಲವು ವಿಭಾಗಗಳಲ್ಲಿ ಹಂಚಿಹೋಗಿತ್ತು. ಅವುಗಳನ್ನೆಲ್ಲಾ ಒಂದಾಗಿ ಮಾಡುವಲ್ಲಿ ಕರ್ನಾಟಕದ ಮಹಾ ನಾಯಕರ ಹೋರಾಟದ ಫಲದಿಂದ ಇವತ್ತು ಕನ್ನಡ ನಾಡು ಆಗಿ ನಿರ್ಮಾಣಗೊಂಡಿದೆ. ಯಾವುದೇ ಭಾಷೆ ಕಲಿಯುವುದು ಅವರ ತಂದೆ-ತಾಯಿಗಳ ಹಕ್ಕಾಗಿದೆ. ಮನೆಯಲ್ಲಿ ಅವರು ಅವರವರ ಭಾಷೆಗಳನ್ನು ಆಡಲಿ ಮನೆಯ ಹೊರಗೆ ಕನ್ನಡಿಗರೊಂದಿಗೆ ಕನ್ನಡ ಭಾಷೆ ಮಾತನಾಡಲಿ ಎಂದು ಹೇಳಿದರು.
ಡಾ. ಶಾಂತಕುಮಾರಿ ಆರ್ ರವಿಕುಮಾರ್ ಮಹಾಪೌರರು ಬೃ.ಬೆಂ.ಮ.ಪಾ. ಇಂದು ಅವಶ್ಯಕವಾಗಿ ಬೇಕಾಗಿರುವಂತಹ ಉತ್ತಮ ವಿಷಯ ಕುರಿತು ಜಿತುರೇಶಾ ಕಾವ್ಯನಾಮದ ತುಕ್ಕಪ್ಪನವರು ಕೈಲಾಸದ ಬಾಗಿಲಲ್ಲಿ ಆತ್ಮಗಳು ಎಂಬ ನಾಟಕದ ಮೂಲಕ ಅಗತ್ಯವಾಗಿ ಬೇಕಾಗಿರುವ ಸಂದೇಶ ತಿಳಿಸುತ್ತಿದ್ದಾರೆ.
ಬಿ ಶೃಂಗೇಶ್ವರ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದರು ನಾಡಿನ ಹಿರಿಯ ಕಿರಿಯ ಕವಿಗಳು ಕವನ ವಾಚನಕ್ಕೆ ಆಗಮಿಸಿದರು. ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಸಂದೇಶ ಸಾರುವಂತೆ ಕವನಗಳು ವಾಚನ ಮಾಡಿದರು. ಕೈಲಾಸದ ಬಾಗಿಲಲ್ಲಿ ಆತ್ಮಹತ್ಯೆಗಳು (ಆತ್ಮಹತ್ಯೆ ತಡೆಯಿರಿ ಜೀವ ಉಳಿಸಿ) ಎಂಬ ಜಾಗೃತಿ ನಾಟಕವನ್ನು ಮೂಲಕ ಶಿವ ಪಾರ್ವತಿ ಮತ್ತು ಯಮ ಹಾಗೂ ಇನ್ನಿತರ ದೃಶ್ಯಗಳ ಮೂಲಕ ಖ್ಯಾತ ಯುವಕವಿ ಜಿತುರೇಶಾ ಕಾವ್ಯನಾಮದ ತುಕ್ಕಪ್ಪನವರು ಉತ್ತಮವಾದ ಸಂದೇಶವನ್ನು ನೀಡಿದ್ದಾರೆ.
ಒಳ್ಳೆಯ ಕಲ್ಪನೆಯ ಮೂಲಕ ಸುಸಂಬಂಧವಾದ ದೃಶ್ಯಗಳೊಂದಿಗೆ ನೋಡುಗರಿಗೆ ಬೇಸರ ಉಂಟು ಮಾಡದೆ ಹಾಸ್ಯದ ಮೂಲಕ ಮನರಂಜನೆಯನ್ನು ನೀಡಿದರು. (ಜಿತುರೇಶಾ ವಿರಚಿತ ಕೈಲಾಸದ ಬಾಗಿಲಲ್ಲಿ ಆತ್ಮಗಳು (ಆತ್ಮಹತ್ಯೆ ತಡೆಯಿರಿ ಜೀವ ಉಳಿಸಿರಿ) ನಾಟಕದ ಬಗ್ಗೆ ನೋಡುಗರ ಅಭಿಪ್ರಾಯಗಳು) ನಾಟಕವನ್ನು ನೋಡಿದ ಖ್ಯಾತ ಸಂಗೀತಗಾರ ಪಂಡಿತ ದೇವಿಂದ್ರಪ್ಪ ಪತ್ತಾರ, ನಾಟಕದ ದೃಶ್ಯಗಳು ನೋಡಿದರೆ ಪ್ರತಿಯೊಂದು ಪಾತ್ರದ ಮೂಲಕ ಉತ್ತಮವಾದ ಸಂದೇಶವನ್ನು ನೀಡಿದೆ ಇಂಥ ನಾಟಕಗಳು ಇಂದು ಸಮಾಜಕ್ಕೆ ಬೇಕಾಗಿವೆ. ನೋಡುಗರಿಗೆ ಎಲ್ಲೂ ಬೇಸರವಾಗುವುದಿಲ್ಲವೆಂದರು.
ಪ್ರೊ . ರಮೇಶ್ ಸಿ ಹೊಸದೊಡ್ಡಿ, ಜಿತುರೇಶಾರವರು ದೊಡ್ಡ ಪ್ರತಿಭಾವಂತರು ಎಂಬುದು ಈ ನಾಟಕದ ಮೂಲಕ ಕಂಡು ಬರುತ್ತದೆ. ನಾಟಕ ಒಂದೊಂದು ದೃಶ್ಯಕ್ಕೆ ಅಂತ್ಯವಾಗಿದೆ ಎಂಬಂತೆ ಕಂಡರೂ ಕೊನೆಯವರೆಗೆ ನೋಡುಗರನ್ನು ಆಸಕ್ತಿಯ ಮೂಲಕ ನಾಟಕ ಮುಗಿಯುವವರೆಗೆ ಹಿಡಿದು ಕೂಡಿಸುವಂತೆ ಮಾಡುತ್ತದೆ. ಇಂದು ಎಂಥೆಥವೋ ನಾಟಕಗಳು ಪ್ರದರ್ಶನ ಆಗುತ್ತವೆ ಆದರೆ ಇಂಥ ನಾಟಕಗಳು ಇಂದಿನ ಸಮಾಜಕ್ಕೆ ಬೇಕಾಗಿರುತ್ತವೆ ಈ ನಾಟಕ ಬೆಂಗಳೂರಿನ ಮೂಲೆ ಮೂಲೆಗಳಿಗೂ ತಲುಪಿ ಹಳ್ಳಿ ಗ್ರಾಮಗಳಿಗೂ ಮುಟ್ಟಬೇಕು.
ಶಿವ ಪಾರ್ವತಿ ಯಮರಾಜ ಮತ್ತು ಅನೇಕ ಪಾತ್ರಗಳು ಉತ್ತಮವಾದ ನಟನೆಯ ಮೂಲಕ ನಾಟಕಕ್ಕೆ ದೊಡ್ಡ ಶಕ್ತಿಯನ್ನು ತುಂಬಿದ್ದಾರೆ ಎಂದರು. ಪ್ರೊ . ಡಾ. ಪ್ರಕಾಶ್ ಜಿ. ಎ. ಇಂಥ ನಾಟಕ ನೋಡಿದ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಅನಿಸಿಕೊಂಡವರಿಗೆ ಸಾಯಬಾರದು ಎಂದು ಅನಿಸುತ್ತದೆ. ಜಿತುರೇಶಾ ತಮ್ಮ ಹೃದಯದ ನೋವುಗಳು ನಾಟಕದ ಮೂಲಕ ರಂಜನೆಯ ಮೂಲಕ ಪ್ರಸ್ತುತ ಪಡಿಸಿದ್ದಾರೆ ಅವರ ಕಲ್ಪನಾ ಶಕ್ತಿ ಅಮೋಘವಾದುದು ಎಂದರು. ಒಟ್ಟಾರೆ ರಾಜ್ಯೋತ್ಸವ, ಸಾಂಸ್ಕೃತಿಕ ಸಮ್ಮೇಳನ, ಸುಗಮ ಸಂಗೀತ, ನೃತ್ಯ, ಕವಿಗೋಷ್ಠಿ, ನಾಟಕದ ಮೂಲಕ ಅರ್ಥಪೂರ್ಣವಾಗಿ ಮೂಡಿ ಬಂದಿದೆ.