ದೇವನಹಳ್ಳಿ: ನಮ್ಮ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಟ್ಟಡ ನವೀಕರಣ ಹಾಗೂ ಸಭಾಭವನದ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ನಿರ್ದೇಶಕರಿಗೆ ಹಾಗೂ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಸಂಘದ ಅಧ್ಯಕ್ಷ ಎಸ್.ಕೆ. ನಾಗೇಶ್ ತಿಳಿಸಿದರು.
ಅವರು ಬೊಮ್ಮವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ನಂತರ ಮಾತನಾಡಿ ಮಾನ್ಯ ಕೇಂದ್ರ ಸಹಕಾರ ಸಚಿವರಾದ ಅಮಿತ್ ಷಾ ರವರ ದೂರದೃಷ್ಠಿಯಿಂದ ದೇಶಾಧ್ಯಂತ ಏಕರೂಪ ರೈತರ ಸಹಕಾರ ಸಂಘಗಳನ್ನು ರೂಪಿಸಿ ಪ್ರತಿಯೊಂದು ಆನ್ಲೈನ್ ಮುಖಾಂತರ ನಡೆಯುತ್ತಿದೆ, ಬೊಮ್ಮವಾರ ಕಳೆದ 2ವರ್ಷಗಳಲ್ಲಿ ಅಧಿಕ ಲಾಭಾಂಶ ಕಂಡಿದೆ ಎಲ್ಲಾ ಸದಸ್ಯರು ಕೈಗೂಡಿಸಿ ಸಹಕಾರ ನೀಡಿದ್ದರಿಂದ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯವಾಯಿತು, ನಮ್ಮ ಸಂಘದಲ್ಲಿ ರಿಯಾಯಿತಿ ದರದಲ್ಲಿ ರಸಗೊಬ್ಬರ, ಪೌಷ್ಠಿಕ ಆಹಾರ ಒದಗಿಸಿ ಅತ್ಯುತ್ತಮ ಸಂಘವೆಂದು ಹೆಸರು ಪಡೆದಿದೆ ಎಂದರು.
ಈ ಸಮಯದಲ್ಲಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ಬೊಮ್ಮವಾರ ಸಂಘದ ಕಟ್ಟಡ ನವೀಕರಣ ಮಾಡಲು ಜಿಲ್ಲಾ ಬ್ಯಾಂಕ್ ಹಾಗೂ ನಬಾರ್ಡ್ ಸಹಕಾರ ನೀಡಿದೆ, ಪ್ರತಿಯೊಬ್ಬರೂ ನಿಮ್ಮ ಸಂಘದಲ್ಲಿ ದೊರೆಯುವ ಗೊಬ್ಬರ, ಪಶು ಆಹಾರ ಕೊಂಡು ಲಾಭಾಂಶವನ್ನು ವೃದ್ಧಿಸಿಕೊಳ್ಳಿ, ರೈತರಿಗೆ, ಸ್ತ್ರೀ ಶಕ್ತಿ ಸಂಘಗಳಿಗೆ ಪ್ರೋತ್ಸಾಹ ನೀಡಿ, ಅವರ ವ್ಯವಹಾರ ಸಹಕಾರ ಸಂಘದಲ್ಲಿಯೇ ನಡೆಸುವಂತಾಗಲಿ, ಆದಷ್ಟು ನಿಶ್ಚಿತ ಠೇವಣೆ ಸಂಗ್ರಹ ಮಾಡಿ ಸಂಘಕ್ಕೆ ಲಾಭ ಬರಲಿದೆ ಎಂದು ಸಲಹೆ ನೀಡಿದರು.
ಈ ಸಮಯದಲ್ಲಿ ಮಾಜಿ ಶಾಸಕರಾದನಿಸರ್ಗ ನಾರಾಯಣಸ್ವಾಮಿ, ಪಿಳ್ಳಮುನಿ ಶಾಮಪ್ಪ, ಜಿ,ಚಂದ್ರಣ್ಣ, ಎನ್.ರಾಮಮೂರ್ತಿ, ಜಿ.ಎ. ರವೀಂದ್ರ, ಸುಂದರೇಶ್, ರವಿಕುಮಾರ್, ವಿಜಯಕುಮಾರ್, ಗೋಪಾಲಸ್ವಾಮಿ, ಸಂಘದ ಉಪಾಧ್ಯಕ್ಷೆ ಪುಷ್ಪ ಸದಸ್ಯರಾದ ಕೋಡಿಮಂಚೇನಹಳ್ಳಿ ಎಸ್.ನಾಗೇಶ್, ಟಿ.
ಹೊಸಹಳ್ಳಿ ಟಿ.ರವಿ, ಉಗನವಾಡಿ ಎನ್.ನಾರಾಯಣಸ್ವಾಮಿ, ಮಾಳಿಗೇನಹಳ್ಳಿ ಎನ್.ಮುನಿಯಪ್ಪ, ಬೊಮ್ಮವಾರದ ಎ.ರಾಮಾಂಜಿನಪ್ಪ, ಮುನಿಆಂಜಿನಪ್ಪ, ರಮೇಶ್, ನವೀನ್ ಕುಮಾರ್, ಹೆಚ್.ಮುನಿಕೃಷ್ಣ, ಅಂಬಿಕಾ, ಎನ್.ಮುನಿಯಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಚಂದ್ರ, ಮಾರಾಟ ಗುಮಾಸ್ತ ಎನ್.ಸುರೇಶ್ ನಗದು ಗುಮಾಸ್ಥರಾದ ಶಿಲ್ಪ ಸೇರಿದಂತೆ ಅನೇಕರು ಹಾಜರಿದ್ದರು.