ರಾಜಮುಡಿ ಬ್ರಹ್ಮೋತ್ಸವದ ಆರನೇದಿನ ನ.೧೧ರಂದು ಕಣಿವೆಬಳಿಯಿರುವ ತೊಟ್ಟಿಲಮಡು ಬಳಿಸಂಜೆ ೪ರಿಂದ ಜಾತ್ರೆನಡೆಯುತ್ತದೆ ಮಾಧ್ಯಮಗಳು ಆಸಕ್ತಿವಹಿಸಿ ಪ್ರಚಾರ ನೀಡಿದ ಪರಿಣಾಮ ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ ಮೇಲುಕೋಟೆ ಗ್ರಾ.ಪಂವತಿಯಿAದ ದೀಪಾಲಂಕಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಮಾಡಲಾಗುತ್ತಿದೆ. ವಿವಿಧ ಸಮುದಾಯದವರು ಸಂಜೆ ರುಚಿಕರವಾದ ಕದಂಬ ಪ್ರಸಾದ ತಯಾರಿಸಿ ಜಾತ್ರೆಗೆ ಬರುವ ಸಹಸ್ರಾರು ಭಕ್ತರಿಗೆ ವಿತರಣೆಮಾಡುತ್ತಾರೆ. ಜಾತ್ರೆಗೂ ಮುನ್ನ ಅಷ್ಠತೀರ್ಥೋತ್ಸವ ಬೆಳಿಗ್ಗೆ ೮ಗಂಟೆಗೆ ಕಲ್ಯಾಣಿಯಲ್ಲಿ ಮೊದಲ ಅಭಿಷೇಕದೊಂದಿಗೆ ಆರಂಭವಾಗಿ ಸಂಜೆ ೪ ಗಂಟೆಗೆ ವೈಕುಂಠಗAಗೆ ತೊಟ್ಟಿಲಮಡುವಿನಲ್ಲಿ ಕೊನೆಯ ಅಭಿಷೇಕದೊಂದಿಗೆ ಮುಕ್ತಾಯವಾಗುತ್ತದೆ ನಂತರ ಯೋಗಾನರಸಿಂಹಸ್ವಾಮಿ ಬೆಟ್ಟದ ಗಿರಿಪ್ರದಕ್ಷಿಣೆ ನಡೆದು ಮಹೋತ್ಸವ ರಾತ್ರಿ ೮ಗಂಟೆಯವೇಳೆಗೆ ಮುಕ್ತಾಯವಾಗಲಿದೆ.