ಬೆಂಗಳೂರು: ಮಾಜಿ ಸಚಿವ ನಾಗೇಂದ್ರ ಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ. ವಾಲ್ಮಿಕಿ ಅಭಿವೃದ್ಧಿ ನಿಗಮದ 95 ಕೋಟಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಗೇಂದ್ರ ಪಡೆದಿರುವ ಜಾಮೀನು ರದ್ದು ಕೋರಿ ಅರ್ಜಿ ಇ.ಡಿ. ಅರ್ಜಿ ಸಲ್ಲಿಸಲಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಜಾಮೀನು ರದ್ದು ಮಾಡಲು ಹೈಕೋರ್ಟ್ ಗೆ ಇಡಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ.
ನಾಳೆ ಅರ್ಜಿಯ ವಿಚಾರಣೆ ನ್ಯಾ. ಎಂ.ನಾಗಪ್ರಸನ್ನರ ಏಕಸದಸ್ಯ ಪೀಠದಲ್ಲಿ ನಡೆಯಲಿದೆ.ಪ್ರಕರಣದಲ್ಲಿ ನಾಗೇಂದ್ರರಿಂದ ಚುನಾವಣೆ ಬಳಕೆಗೆ ಹಣ ವರ್ಗಾವಣೆ ನಡೆದಿದೆ ಎಂದು ತನಿಖೆಯಲ್ಲಿ ಈ ಅಂಶಗಳಿ ಮೇಲ್ನೋಟಕ್ಕೆ ಕಂಡುಬಂದಿವೆ.
ಸಾಕಷ್ಟು ಸಾಕ್ಷ್ಯಗಳನ್ನು ತನಿಖೆಯ ವೇಳೆ ಪತ್ತೆ ಮಾಡಲಾಗಿದೆ ಅಕ್ರಮ ವರ್ಗಾವಣೆ ಕಾಯ್ದೆ-2002ರ ಕಲಂ 45ರಡಿ ಜಾಮೀನು ನೀಡಲು ಸಾಧ್ಯವಿಲ್ಲ. ಹೀಗಾಗಿ ಬಿ.ನಾಗೇಂದ್ರಗೆ ನೀಡಿರುವ ಜಾಮೀನು ರದ್ದುಪಡಿಸಬೇಕು ತನ್ನ ಅರ್ಜಿಯಲ್ಲಿ ಇಡಿ ಮನವಿಯ ಮಾಡಿಕೊಂಡಿದೆ.ಸದ್ಯ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ದ ಜಾಮೀನು ನೀಡಿದೆ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಜಾಮೀನು ನೀಡಿದ್ದಾರೆ.