ಹೊಸಕೋಟೆ: ನಾಡಿನ ಕಲೆ, ಸಂಸ್ಕøತಿ, ಜನಜೀವನದ ಬಗ್ಗೆ ಅರಿವು ಮೂಡಿಸುವಲ್ಲಿ ನಾಟಕಗಳು ಸಹಕಾರಿಯಾಗಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಡಾ: ಬಾಲಗುರುಮೂರ್ತಿ ಹೇಳಿದರು.ಅವರು ಸಮೀಪದ ಅಭಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಜನಪದರುಸಾಂಸ್ಕøತಿಕ ವೇದಿಕೆ ವತಿಯಿಂದ 84ನೇ ರಂಗಮಾಲಿಕೆ ಅಭಿಯಾನದಡಿ ಏರ್ಪಡಿಸಿದ್ದ ರಂಗಾಯಣ ತಂಡದ ಕಲಾವಿದರ ಅಭಿನಯದ “ಗೋರ್ಮಾಟಿ” ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರಕಾರದ ವಿವಿಧ ಯೋಜನೆಗಳಿಂದ ಅಲೆಮಾರಿಗಳ ಅಭಿವೃದ್ಧಿ ಸಾಧ್ಯವಾಗಿದ್ದು ಅವರೂ ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಿ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ. ಅಲೆಮಾರಿ ಜನಾಂಗಗಳ ಕುರಿತು ಆಳವಾಡಿ ಅಧ್ಯಯನ ನಡೆಸಿರುವ ಇವರು, ಬುಡ್ಗಜಂಗಮ ಸಮಾಜವನ್ನು ಪ್ರಕಟವಾಗಿರುವ “ಬುಡ್ಗನಾದ” ನಾಟಕದ ಲೇಖಕರೂ ಆದ ಇವರು ಮುಂದುವರೆದು ಮಾತನಾಡಿ ಇವರ ಸಮೃದ್ಧ ಸಾಂಸ್ಕøತಿಕ ಪರಂಪತೆಯು ಜಗತ್ತಿಗೆ ಅನಾವರಣಗೊಳ್ಳಬೇಕಾದ ಅಗತ್ಯವಿದೆ ಎಂದರು.
ಈ ದಿಶೆಯಲ್ಲಿ ಇಂತಹ ನಾಟಕ ಪ್ರದರ್ಶನಗಳು ಸಮುದಾಯದಲ್ಲಿ ಇಂತಹ ಜನಾಂಗಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ ಎಂದರು.
ಜನಪದರು ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಪಾಪಣ್ಣ ಕಾಟಂನಲ್ಲೂರ್ ಮಾತನಾಡಿ ಬಂಜಾರ ಪಂಡಗದ ಸೂಕ್ಷ್ಮಾತಿಸೂಕ್ಷ್ಮ ಬದುಕಿನ ವಿವರಗಳನ್ನುನಾಟಕವಾಗಿಸಿ “ಗೋರ್ ಮಾಟಿ” ಶಿರೋನಾಮೆಯಲ್ಲಿ ಡಾ: ಶಿರಗಾನಹಳ್ಳಿ ಶಾಂತನಾಯಕ್ ರಚಿಸಿರುವ ಮತ್ತು ನಿರ್ದೇಶಕ ಬಸವಲಿಂಗಯಯನವರ ಶ್ರಮ ಅಭಿನಂದನಾರ್ಹ ಎಂದರು.
ನಾಟಕದ ಕಥಾ ವಸ್ತುವು ಅನೇಕ ಕನ್ನಡ ಲೇಖಕರ ಬರಹಗಳ ಆಧಾರವಾಗಿದ್ದು ಅವರಲ್ಲಿ ಲಮಾಣಿ ಲೇಖಕರೇ ಇರುವುದು ಒಂದು ಹೆಗ್ಗಳಿಕೆ ಎಂದು ತಿಳಿಸಿದರು. ವೇದಿಕೆಯು ಕಳೆದ 7 ವರ್ಷಗಳಿಂದ ನಿರಂತರವಾಗಿ ಪ್ರತಿ ತಿಂಗಳ ಎರಡನೇ ಶನಿವಾರಗಳಂದು ರಾಜ್ಯದ ಖ್ಯಾತ ರಂಗತಂಡಗಳ ಕಲಾವಿದರಿಂದ ಸಾಮಾಜಿಕ ಜಾಗೃತಿ ಮೂಡಿಸುವಂತಹ ವಿಭಿನ್ನವಾದ ನಾಟಕ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಬಂಜಾರ ಸಮುದಾಯದ ಉಡುಗೆಯಲ್ಲಿ ಮಹಿಳೆಯರ ನೃತ್ಯಗಳು, ಸಾಂಸ್ಕøತಿಕ ಇತಿಹಾಸವನ್ನು ಪ್ರತಿಬಿಂಬಿಸುವ ದೃಶ್ಯ, ಹಾಡು, ಹಸೆ, ವಿವಾಹ, ಪ್ರಸವದಂತಹ ಅಲೆಮಾರಿ ಜನರ ಕಷ್ಟ ಸುಖಗಳನ್ನು ಹಲವಾರು ಆಯಾಮಗಳಲ್ಲಿ ಪ್ರಸ್ತುತಪಡಿಸಿದ್ದು ಸಭಿಕರ ಮನಸೂರೆಗೊಂಡವು.ತಮಟೆ, ಡೋಲು, ನಗಾರಿ ವಾದ್ಯಗಳ ಮೇಳ ಹಲವಾರು ದೃಶ್ಯಗಳಲ್ಲಿ ಪ್ರೇಕ್ಷಕರು ಸ್ವತಃ ತಾವೇ ಎದ್ದು ಕುಣಿಯಲು ಪ್ರೇರೇಪಿಸಿತು. ಉತ್ತಮವಾದ ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ರಂಗಪರಿಕರಗಳು, ವಿಶೇಷವಾಗಿ ಲಂಬಾಣಿ ಹೆಂಗೆಳೆಯರ ವೇಷಭೂಷಣಗಳು. ದೃಶ್ಯಗಳನ್ನು ವರ್ಣರಂಜಿತಗೊಳಿಸಿತು.
ನಾಟಕವನ್ನು ವೀಕ್ಷಿಸಿದ ಪ್ರಾಯೋಜಕರು, ಸಮಾಜ ಸೇವಕರಾದ ವಳಗೆರೆಪುರದ ವಿ.ಎನ್. ವೆಂಕಟೇಶ್ ರವರು ನಾಟಕದ ನಿರ್ದೇಶಕರನ್ನು, ನಟರನ್ನು, ತಾಂತ್ರಿಕ ವರ್ಗದವರನ್ನು ಅಭಿನಂದಿಸಿದರು.ಸಾಹಿತಿ ಬಾಗೇಪಲ್ಲಿ ಕೃಷ್ಣಮೂರ್ತಿ ನಾಟಕದಬಗ್ಗೆ ಮತ್ತಷ್ಟು ಪ್ರಯೋಗಗಳನ್ನು ನಡೆಸಿ ಸೂತ್ರದಾರರಿಂದ ಸ್ಪಷ್ಟ ನುಡಿಗಳಿಂದ ಹಲವು ಅಂಶಗಳನ್ನು ಪ್ರದರ್ಶಿಸಿದ್ದಲ್ಲಿ ಇನ್ನೂ ಹೆಚ್ಚುಪರಿಣಾಮಕಾರಿಯಾಗಲಿತ್ತು ಎಂದು ಅನಿಸಿಕೆ ವ್ಯಕ್ತಪಡಿಸಿದರು. ಜನಪದರು ಸಾಂಸ್ಕøತಿಕ ವೇದಿಕೆಯ ಪದಾಧಿಕಾರಿಗಳಾದ ದೊಡ್ಡಬನ ಹಳ್ಳಿ ಸಿದ್ಧೇಶ್ವರ, ಎಂ.ಸುರೇಶ್, ಚಲಪತಿ, ಶಿವಕುಮಾರ್ ಇನ್ನಿತರರು ಭಾಗವಹಿಸಿದ್ದರು.