ಡಾ.ಜಿ. ಕೃಷ್ಣಪ್ಪ ಅವರು ನಾಡಿನ ಪ್ರಾತಿನಿಧಿಕ ಸಂಸ್ಥೆ ಉದಯಭಾನು ಕಲಾಸಂಘದ ಹಿರಿಯ ಸದಸ್ಯರಲ್ಲಿ ಒಬ್ಬರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉನ್ನತ ಅಧ್ಯಯನ ಕೇಂದ್ರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಇದೀಗ ಅವರು ಪ್ರಕಟಿಸಿರುವ ಕುವೆಂಪು ವಚನ ದೀಪಿಕೆ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದೆ. ಡಾಕ್ಟರ್ ಕೃಷ್ಣಪ್ಪ ಅವರಿಗೆ ಉದಯಭಾನು ಕಲಾಸಂಘದ ಪರವಾಗಿ ಆತ್ಮೀಯ ಅಭಿನಂದನೆ ಹಾಗೂ ಶುಭಾಶಯಗಳು.
೧೯೭೪ರಲ್ಲಿ ಸಂಘದ ಉಪನ್ಯಾಸ ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆ ಅವರ ಬಗ್ಗೆ ಮೊದಲ ಉಪನ್ಯಾಸ ನೀಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.
ಆನಂತರ ಸಂಘದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅವರ ಬಗ್ಗೆ ಕಾವ್ಯ ಶೋಧಕ ಎಂಬ ಪರಿಚಯ ಪುಸ್ತಕವನ್ನು ಸಂಘವು ಪ್ರಕಟಿಸಿದೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಅವರ ಕೃತಿ ಕುವೆಂಪು ರಾಮಾಯಣ ಹನುಮದ್ಧರ್ಶನ ಪುಸ್ತಕವನ್ನು ಸಂಘವು ಪ್ರಕಟಿಸಿದೆ. ಅವರ ಸಾಧನ ಪಥ ವಿಸ್ತಾರಗೊಂಡಿದೆ. ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು, ದ. ರಾ ಬೇಂದ್ರೆ ರಾಷ್ಟಿçÃಯ ಪ್ರಶಸ್ತಿಗೆ ಭಾಜನರಾದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಹರಸಿ ಬಂದಿತು. ಇದೀಗ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಕ್ಕೆ ಭಾಜನರಾಗಿದ್ದಾರೆ. ಅವರ ಸಾಧನಾ ಪಥ ರಾಷ್ಟçಮಟ್ಟದಲ್ಲಿ ವಿಸ್ತಾರಗೊಳ್ಳಲಿ ಎಂಬ ಆಶಯದೊಂದಿಗೆ ಈ ಸಂದರ್ಭದಲ್ಲಿ ಆತ್ಮೀಯ ಶುಭಾಶಯ ಹಾಗೂ ಅಭಿನಂದನೆಗಳು.
-ಎಂ.ನರಸಿAಹ, ಉದಯಭಾನು ಕಲಾಸಂಘ, ಬೆಂಗಳೂರು