ಬೆಂಗಳೂರು: ಹೆಣ್ಣೂರ್ ಮತ್ತು ಬಾಗಲಗುಂಟೆ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಒಟ್ಟು ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ಅಂದಾಜು 35 ಲಕ್ಷ ರೂ ಬೆಲೆ ಬಾಳುವ ಕಳವು ಮಾಡಿದ್ದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಹೆಣ್ಣೂರ್ ಪೊಲೀಸರು ಪೂಜಾರಿ(19) ಎಂಬ ಯುವಕನನ್ನು ಬಂಧಿಸಿ 11 ಮೊಬೈಲ್ ಫೋನ್ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿರುತ್ತಾರೆ ಇವುಗಳ ಮೌಲ್ಯ 4,25,000 ಆಗಿರುತ್ತದೆ.
ಬಗಲುಗುಂಟೆ ಪೊಲೀಸರು ಮನೆ ಕಳವು ಹಾಗೂ ಮೋಟರ್ ಸೈಕಲ್ ಕಳವು ಮಾಡುತ್ತಿದ್ದ ಶ್ರೀನಿವಾಸ್(38),
ವೆಂಕಟೇಶ್(23) ಮತ್ತು ಸಾಗರ್(21) ಇವರುಗಳನ್ನು ಬಂಧಿಸಿ 30 ಲಕ್ಷ ರೂ ಬೆಲೆ ಬಾಳುವ 76 ಗ್ರಾಂ ಚಿನ್ನಾಭರಣ 16 ವಿವಿಧ ಬಗೆಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ