ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣವಾ ಲೋಕಾರ್ಪಣೆಯಾಗಿ ನಾಳೆಗೆ ಒಂದು ವರ್ಷವಾಗಲಿದೆ. .ಕಳೆದ ವರ್ಷ ಇದೇ ದಿನದಂದು ಅಯೋಧ್ಯೆಯ ಶ್ರೀರಾಮಲಲ್ಲಾನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಆಗಿದ್ದು. ಕಳೆದ ವರ್ಷ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಬಹಳ ವಿಜೃಂಭಣೆಯಿಂದ ನಡೆದಿತ್ತು.
ದಿನಾಂಕದ ಪ್ರಕಾರ ಜನವರಿ 22 ಆದರೂ, ಹಿಂದು ಪಂಚಾಗದ ತಿಥಿಯ ಪ್ರಕಾರ ನಾಳೆಗೆ ರಾಮ ಮಂದಿರ ನಿರ್ಮಾಣವಾಗಿ ಲೋಕಾರ್ಪಣೆಗೊಂಡು ಒಂದು ವರ್ಷ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿ ವರ್ಷದ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯನ್ನು “ಪ್ರತಿಷ್ಠಾ ದ್ವಾದಶಿ” ಎಂದು ಕರೆಯಲು “ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್” ನಿಂದ ಕರೆ ನೀಡಲಾಗಿದೆ.
ಟ್ರಸ್ಟ್ನ ವತಿಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, “ಪ್ರತಿಷ್ಠಾ ದ್ವಾದಶಿ” ಎಂದು ಕರೆಯಲು ಕರೆ ನೀಡಲು ಮನವಿ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.ಇದರ ಬಗ್ಗೆ ಈವರೆಗೂ ಯಾವುದೇ ನಿಲುವು ಪ್ರಕಟಿಸದ ಕೇಂದ್ರ ಸರ್ಕಾರ. ನಾಳೆಗೆ ಅಯೋಧ್ಯೆಯ ಶ್ರೀ ರಾಮ ಮಂದಿರ ಲೋಕಾರ್ಪಣೆ ಆಗಿ ಒಂದು ವರ್ಷ ತುಂಬಿದೆ.