ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್’ಸಿಎಲ್) ಸಿಹಿ ಸುದ್ದಿಯೊಂದನ್ನು ನೀಡಿದೆ.
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಆರಂಭವಾಗುತ್ತಿದ್ದ ನಮ್ಮ ಮೆಟ್ರೋ ಸೇವೆ ಜ.13ರಿಂದ ಅಂದರೆ ಸೋಮವಾರದಿಂದ ಮುಂಜಾನೆ 4:15 ಕ್ಕೆ ಮೆಟ್ರೋ ಸೇವೆ ಆರಂಭಿಸಲಿದೆ.
ಜನಸಂದಣಿ ಆಧರಿಸಿ ಬಿಎಂಆರ್’ಸಿಎಲ್ ಪ್ರತಿ ಸೋಮವಾರದಂದು ಮೆಟ್ರೋ ಸಮಯದಲ್ಲಿ ಬದಲಾವಣೆ ಮಾಡಿದೆ.
ನಗರಕ್ಕ ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಸಿಟಿ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಕ್ಕೆ ಮುಂಜಾನೆ ಸಂಪರ್ಕನ್ನು ಒದಗಿಸುವ ಸಲುವಾಗಿ ನಮ್ಮೆ ಮೆಟ್ರೋ ನಿಗಮವು ಪ್ರತಿ ಸೋಮವಾರದಂದು ಮಾತ್ರ ಮೆಟ್ರೋ ಸೇವೆಯನ್ನು ಜ.13ರಿಂದ ಜಾರಿಗೆ ಬರುವಂತೆ ಈಗಿರುವ ಮುಂಜಾನೆ 5 ಗಂಟೆಗೆ ಬದಲಾಗಿ 4.15ರಿಂದ ಪ್ರಾರಭಿಸಲಿದೆ.
ಮತ್ತೆಲ್ಲಾ ದಿನಗಳಂದು ಮೆಟ್ರೋ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಾರ್ವಜನಿಕರು ತಮ್ಮ ಸುಗಮ ಪ್ರಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಮನವಿ ಮಾಡಿದೆ.
ಈ ನಡುವೆ ಬಿಎಂಆರ್’ಸಿಎಲ್’ನ ಈ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದು, ಭಾನುವಾರದಂದು ಕೂಡ ಇದೇ ರೀತಿಯ ಕ್ರಮವನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.