ಬೆಂಗಳೂರು: ಮಹಾಶಿವಾರಾತ್ರಿ ಹಬ್ಬದ ಅಂಗವಾಗಿ ಬೆಂಗಳೂರು ಮಲ್ಲೇಶ್ವರಂ 15ನೇ ಕ್ರಾಸ್ನಲ್ಲಿರುವ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷರಾಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ನಾಳೆ ಮತ್ತು ನಾಡಿದ್ದು ನಡೆಯಲಿರುವ ಕಾರ್ಯಕ್ರಮಗಳ ವಿವರವನ್ನು ಸುದ್ದಿಗೋಷ್ಠಿಯಲ್ಲಿ ನೀಡಿದ್ದಾರೆ.
ನಾಳೆ ಕಾಡುಮಲ್ಲೇಶ್ವರ ದೇವರಿಗೆ ನಿರಂತರ ಜಲ ಅಭಿಷೇಕ, ಭಕ್ತಾದಿಗಳಿಗೆ ಸರ್ವತ್ರ ದರ್ಶನ ಹಾಗೂ ನಿರಂತರ ಪ್ರಸಾದ ವಿನಿಯೋಗ ಮಾಡಲಾಗುವುದು. 27ರಂದು ಹೂವಿನ ವಿಶೇಷ ಅಲಂಕಾರದೊಂದಿಗೆ 15 ಕರ್ನಾಟಕದ ಹೆಮ್ಮೆಯ ಸಾಂಸ್ಕøತಿಕ ಹಾಗೂ ಕಲಾತಂಡದ ಜತೆಗೆ ಶ್ರೀ ಗಣಪತಿ ಸುಬ್ರಹ್ಮಣ್ಯ ಹಾಗೂ ಭ್ರ್ರಮರಾಂಭ ಸಮೇತ ಕಾಡು ಮಲ್ಲಿಕಾರ್ಜುನ ಸ್ವಾಮಿಯವರ ರಥಗಳ ಉತ್ಸವ ನಡೆಯಲಿದೆ ಎಂದು ಅವರು ವಿವರ ನೀಡಿದ್ದಾರೆ.