ಮೂಢನಂಬಿಕೆಗಳನ್ನು ನಂಬಿ ಅಂಧರಾಗಬೇಡಿ, ಅದರ ಹಿಂದೆ ಬೇರೇನೇ ವಿಷಯ ಇರುತ್ತೆ, ಅದನ್ನು ನೋಡಿದ ಮೇಲೇ ನಿರ್ಧರಿಸಿ, ಭ್ರಮೆ ಹಾಗೂ ರಿಯಾಲಿಟಿಯ ಸುತ್ತ ನಡೆಯುವ ಕಥೆ ಇಟ್ಟುಕೊಂಡು ವ್ಯಾನವರ್ಣ ಜಮ್ಮುಲ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರ “ಮಾಂತ್ರಿಕ” ಅ.18ರ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಹಿಂದಿರುವ ಸತ್ಯಾಸತ್ಯತೆಯ ಹುಡುಕಾಟ ನಡೆಸುವ ವ್ಯಾಸವಾನ್ ಕೃಷ್ಟ ಎಂಬ ಘೋಸ್ಟ್ ಹಂಟರ್ ಪಾತ್ರದಲ್ಲೂ ಕಾಣಿಸಿಕೊಂಡಿರುವ ವ್ಯಾನ ವರ್ಣ ಜಮ್ಮುಲ ನಿರ್ಮಾಣ, ನಿರ್ದೇಶನ ಸೇರಿದಂತೆ 8 ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಕರ್ನಾಟಕ – ಮಹಾರಾಷ್ಟ್ರದ ಗಡಿ ಮಾರ್ನುಡಿ ಎಂಬ ಸ್ಥಳದಲ್ಲಿ ಬೆಳಿಗ್ಗೆಯಿಂದ ಸಂಜೆ ಯವರೆಗೆ ನಡೆಯುವ ಟೈಂ ಟ್ರಾವೆಲ್ ಕಥೆಯಿದು. ಮೊದಲು ನಮ್ಮ ಮನಸಿ ನಲ್ಲಿರುವ ಭಯ ಹೋಗಬೇಕು, ಹಾರರ್ ಜೊತೆಗೆ ಸಮಾಜಕ್ಕೆ ಸಂದೇಶ ಕೊಡುವ ಪ್ರಯತ್ನ ಮಾಡಿದ್ದೇವೆ ಎನ್ನುವುದು ನಿರ್ದೇಶಕರ ಮಾತು.
ರಾಧಿಕಾ ಮಾಲಿ ಪಾಟೀಲ ಹಾಗೂ ಮೈಥಿಲಿ ನಾಯಕ್ ಚಿತ್ರದ ನಾಯಕಿಯರು. ನಿರ್ದೇಶಕರ ಪತ್ನಿ ಶ್ರೀಮತಿ ಆಯನ ಚಿತ್ರದ ಕಾರ್ಯಕಾರಿ ನಿರ್ಮಾಪಕಿ ಯಾಗಿದ್ದಾರೆ. ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್ ಲಾಂಛ ನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸೆನ್ಸಾರ್ ನಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಸ್ಟಾಲಿನ್ ಅವರ ಸಂಗೀತ ಸಂಯೋಜನೆ, ಅನಿಲ್ ಆಂಟೋನಿ ಹಾಗೂ ರಮೇಶ್ ಮರ್ಯರಿಪಲ್ಲಿ ಅವರ ಛಾಯಾಗ್ರಹಣ, ಲಯನ್ ಜಿ.ಗಂಗರಾಜು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ವಿಜಯ್ ಸಿನಿಮಾಸ್ ಮೂಲಕ 40 ಚಿತ್ರಮಂದಿರಗಳಲ್ಲಿ ಮಾಂತ್ರಿಕ ಚಿತ್ರ ಬಿಡುಗಡೆಯಾಗುತ್ತಿದೆ.