ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ಒಂದೇ ಒಂದು ದಿನ ಬಾಕಿ ಇದೆ, ಚುನಾವಣಾ ಪ್ರಚಾರಗಳಿಗೆ ತೆರೆ ಬಿದ್ದಿದೆ. ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ 05 ರಂದು ನಡೆಯಲಿದ್ದು, ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ಫೆಬ್ರವರಿ 8ರಂದು ತೆರೆ ಬೀಳಲಿದೆ.
ದೆಹಲಿಯ ಎಲ್ಲಾ 70 ಸ್ಥಾನಗಳಿಗೂ ನಾಳೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ನಡೆಯಲಿದ್ದು, ದೆಹಲಿಯ 1 ಕೋಟಿ 55 ಲಕ್ಷ ಮತದಾರರು ದೆಹಲಿಯ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ. ಚುನಾವಣೆಗೆ ಸಿದ್ಧತೆಗಳು ಪೂರ್ಣಗೊಂಡಿವೆ,ಪೊಲೀಸ್ ಮತ್ತು ಭದ್ರತಾ ಪಡೆಗಳ ನಿಯೋಜನೆ ಪ್ರಾರಂಭವಾಗಿದೆ.
ಚುನಾವಣಾ ಪ್ರಚಾರದ ವೇಳೆ ಚುನಾವಣೆಗಾಗಿ ನಿಯೋಜಿತರಾಗಿದ್ದ ಜಾಗೃತದಳದವರು ಮತ್ತು ಇತರೆ ಸಿಬ್ಬಂದಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 220 ಕೋಟಿ ರೂಪಾಯಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.80 ಕೋಟಿ ರೂಪಾಯಿ ಮದ್ಯ, 81 ಕೋಟಿ ರೂ. ಚಿನ್ನ ಸೇರಿದಂತೆ 40 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.