ಮಳವಳ್ಳಿ: ಐತಿಹಾಸಿಕ ಸಿಡಿ ಹಬ್ಬ ಜ.7 ಶುಕ್ರವಾರ, 8 ಶನಿವಾರ ರಂದು ನಡೆಯಲಿದೆ. ಮಂಗಳವಾರ ತಾಯಿ ದಂಡೀನಮಾರಮ್ಮನಿಗೆ ವಿಶೇಷ ಪೂಜೆಗಳು ಜರುಗಲಿವೆ. ತಬ್ಬಿಹಿಟ್ಟಿನ ಆರತಿ, ಮತ್ತು ಹಲವಾರು ಪೂಜೆಗಳು ಮಂಗಳವಾರ ಮುಂಜಾನೆ ಆರಂಭವಾಗುತ್ತವೆ. ತಾಲ್ಲೂಕಿನ ಸುತ್ತಲಿನ ಗ್ರಾಮದಲೂ ದಂಡೀನ ಮಾರಮ್ಮನ ಕೃಪೆಗೆ ಪ್ರಾತ್ರರಾಗುತ್ತಾರೆ.
ಸುತ್ತಲ ಗ್ರಾಮಗಳದ ನೆಲಮಾಕನಹಳ್ಳಿ, ನೆಲ್ಲರೂ, ಮಾದಹಳ್ಳಿ, ಕಾಗೇಪುರ, ಕಂದೇಗಾಲ, ತಮ್ಮಡ ಹಳ್ಳಿ, ಅಂಚೇದೊಡ್ಡಿ, ನಿಡಘಟ್ಟ, ಮಾರೇಹಳ್ಳಿ, ಹಲವಾರು ಗ್ರಾಮದವರು ಹಬ್ಬ ಆಚರಣೆ ಮಾಡಲಿದ್ದರೆ.ಶುಕ್ರವಾರವೇ ಹಬ್ಬದ ಕಾರ್ಯಕ್ರಮಗಳು ಜರುಗಲಿದೆ. ಸರ್ವಜನಾಂಗದವರು ಜಾತಿ ಭೇಧವಿಲ್ಲದೆ ಹಬ್ಬ ಆಚರಿಸಲಿದ್ದಾರೆ.ಶುಕ್ರವಾರ ಸಿಡಿರಣ್ಣ ಬಂಡಿಗೆ ಹಗ್ಗ ತರುವುದು ರಾತ್ರಿ ಎಲ್ಲಾ ಬಾಯಿಬೀಗ, ತಬ್ಬಿಹಿಟ್ಟಿನ ಆರತಿ,ಘಟ್ಟ ಉತ್ಸವ, ನಾಟಕ ಹಲವಾರು ಕಾರ್ಯಕ್ರಮ ನಡೆಯಲ್ಲಿವೆ.
ಶುಕ್ರವಾರ ಮಧ್ಯರಾತ್ರಿ 12ಕ್ಕೆ ಕೋಟೆ ಬೀದಿ ನಾಡ ಗೌಡ ರವರ ಮನೆ ಮುಂಭಾಗದಿಂದ ಸಿಡಿರಣ್ಣ ರಥಕ್ಕೆ ಹೂವುಗಳಿಂದ, ಬಲುನ್ನುಗಳಿಂದ ಅಲಂಕಾರ ಮಾಡಿ ಚಾಲಾನೆ ನೀಡಲಗುತ್ತದೆ ನಂತರ ಸಾರಂಘ ಫಾಣಿ ಬೀದಿಯಲ್ಲಿ ಸಿಡಿ ಮನೆ ಎಂಬ ಸ್ಥಳದಲ್ಲಿ ಮಾನವನ ಹೋಲುವ ಕಂಚಿನ ಪ್ರತಿಮೆಯನ್ನು ಸಿಡಿರಣ್ಣ ರಥಕ್ಕೆ ತೆಂಗಿನ ಮರದ ಉದ್ದದ ಕಂಬದ ತುದಿಗೆ ಕಟ್ಟಲಾಗುತ್ತದೆ. ನಂತರ ಶುಕ್ರವಾರ ರಾತ್ರಿಯಲ್ಲಾ ಕೋಟೆಬೀದಿ, ಪೇಟೆ ಬೀದಿ,ಗಂಗಾಮತ ಬೀದಿ ಸುತ್ತಿ ಶನಿವಾರ ಬೆಳಿಗ್ಗೆ ಅಂತರಾಮಯ್ಯ ಸರ್ಕಲ್ ಗೆ ಬಂದು ಸುಲ್ತಾನ್ ರಸ್ತೆಯಲ್ಲಿ ಇರುವ ಪಟ್ಟಲದಮ್ಮ ದೇವಲಾಯದಲ್ಲಿ ಮೂರು ಸುತ್ತು ಗಿರಣಿ ತಿರುಗಿ ನಿಲ್ಲುತ್ತದೆ.
ನಂತರ ದೇವಲಾಯದ ಅರ್ಚಕರು ಕೊಂಡ ಹಾಯುವರು ಸುತ್ತಲಿನ ಗ್ರಾಮದ ರೈತರು ಸೌಧೆಗಳನ್ನು ತಂದು ಕೊಂಡಕ್ಕೆ ಹಾಕುವರು. ಸಹಸ್ರಾರು ಭಕ್ತರು ಸಿಡಿರಣ್ಣ ರಥೋತ್ಸವಕ್ಕೆ ಹಣ್ಣು ಜವನ ಎಸೆದು ಸಂಭ್ರಮಿಸುವರು ಯುವಕರು ಸಿಡಿ ರಥೋತ್ಸವದ ಬಂಡಿಯಲು ಬಹಳ ಉತ್ಸಾಹಕರಾಗಿರುತ್ತಾರೆ ನಂತರ ಸಿಡಿಹಬ್ಬಕ್ಕೆ ತೆರೆ ಬಿಳಲಿದೆ.