ಬೆಂಗಳೂರು: ಕನ್ನಡ ಜಾನಪದ ಪರಿಷತ್ತು,ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದಿನಾಂಕ 04.01.2025 ರ ಶನಿವಾರ ಬೆಳಿಗ್ಗೆ 10.30ಕ್ಕೆ ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದರಾಜು ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಕಷ್ಣರವರು ಉದ್ಘಾಟನೆಯನ್ನು ನೆರವೇರಿಸಲಿದ್ದು, ಮಾಜಿ ಸಚಿವರು ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪರವರು ಕಾರ್ಯಕ್ರಮದ ಘನ ಉಪಸ್ಥಿತರಿದ್ದು, ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ ಜಾನಪದ ಎಸ್ ಬಾಲಾಜಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಮಾಜಿ ಮಹಾಪೌರರಾದ ಶ್ರೀಮತಿ ಶಾಂತಕುಮಾರಿ, ಕಸಾಪ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಪ್ರಕಾಶಮೂರ್ತಿ, ಮಾಜಿ ಉಪಮಹಾಪೌರರಾದ ಬಿ. ಎಸ್. ಪುಟ್ಟರಾಜು, ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ . ಕೆ ಎಸ್. ಕೌಜಲಗಿ,ಕಜಾಪ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರಾದ ಡಾ. ರಿಯಾಜ್ ಪಾಷಾ, ಕರ್ನಾಟಕ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ವನಮಾಲ ಸಂಪನ್ನ ಕುಮಾರ, ಉದಯ ಕಾಲೇಜು ಪ್ರಾಂಶುಪಾಲರಾದ ಗಿರೀಶ್, ಪ್ರಥಮ ದರ್ಜೆ ಗುತ್ತಿಗೆದಾರರಾದ ಹರ್ಷ, ನಾಗರಬಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೈರಪ್ಪ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ಜಯಶಂಕರ್ ಮತ್ತಿತರರು ಉಪಸ್ಥಿತರಿಲಿದ್ದಾರೆ.
ನಂತರ ಜಾನಪದ ವಿಚಾರ ಸಂಕಿರಣವನ್ನು ಖ್ಯಾತ ಹಿರಿಯ ಜಾನಪದ ಗಾಯಕರಾದ ಶ್ರೀ ಗುರುರಾಜ ಹೊಸಕೋಟೆರವರು ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕದಲ್ಲಿ ಬುಡಕಟ್ಟು ಸಂಸ್ಕೃತಿ ಬಗ್ಗೆ ಖ್ಯಾತ ಜಾನಪದ ವಿದ್ವಾಂಸರಾದ ಡಾ. ಚಿಕ್ಕಣ್ಣ ಎಣ್ಣೆಕಟ್ಟೆ ರವರು, ಜಾನಪದ ಆಚರಣೆಗಳು ಬಗ್ಗೆ ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಪೆÇ್ರ. ಕೆ. ಎಸ್. ಕೌಜಲಗಿ, ದಲಿತ ಜಾನಪದ ಹೊಸ ಸಾಧ್ಯತೆಗಳ ಬಗ್ಗೆ ಆರ್. ಬಿ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ ಸುಭಾಷ್ ರಾಜುಮಾನೆಯವರು ಗೋಷ್ಠಿಗಳಲ್ಲಿ ಮಾತನಾಡುವರು. ನಂತರ ಕನ್ನಡ ಜಾನಪದ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.
ಸಂಜೆ 4ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಹೊಸಕೆರೆ ಶ್ರೀ ಛಾಯದೇವಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀ ಶ್ರೀ ಆದಿತ್ಯಾನಂದನ್ ಗುರೂಜಿಯವರು ವಹಿಸಲಿದ್ದಾರೆ.ಅಧ್ಯಕ್ಷತೆಯನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಿಯಕಷ್ಣರವರು, ಘನ ಉಪಸ್ಥಿತಿಯಲ್ಲಿ ಮಾಜಿ ಸಚಿವರು, ಶಾಸಕರು, ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ. ರವಿಕುಮಾರ್ ಗಣಿಗ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌದರಿ, ಅಧ್ಯಕ್ಷರು, ಭಾರತೀಯ ಸೇನೆ ಟೆರಿಟೋರಿಯಲ್ ಆರ್ಮಿ ಕಮಿಷನ್ಸ್ ಆಫೀಸರ್ ಭವ್ಯ ನರಸಿಂಹಮೂರ್ತಿ, ಇಂದು ಸಂಜೆ ಪತ್ರಿಕೆಯ ಮುಖ್ಯ ಸಂಪಾದಕರಾದ ಡಾ. ಜಿ.ವೈ. ಪದ್ಮ ನಾಗರಾಜ್, ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ, ಮುಖ್ಯ ಅತಿಥಿಗಳಾಗಿ ಖ್ಯಾತ ಜನಪದ ಗಾಯಕ ಗುರುರಾಜ ಹೊಸಕೋಟೆ, ಕವಿಗಳು ಹಾಗೂ ಸಾಂಸ್ಕೃತಿಕ ಚಿಂತಕರಾದ ಡಾ. ಕಾ. ವೆಂ. ಶ್ರೀನಿವಾಸ ಮೂರ್ತಿ, ಕನ್ನಡ ಜಾನಪದ ಪರಿಷತ್ತಿನ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರಾದ ಡಾ. ರಿಯಾಜ್ ಪಾಷ, ಬೆಂಗಳೂರು ನಗರ ಜಿಲ್ಲಾ ನಿಕಟಪೂರ್ವ ಕಸಾಪ ಅಧ್ಯಕ್ಷರಾದ ಮಾಯಣ್ಣ,
ವಿಜಯನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಉಮೇಶ್ ಚಂದ್ರ, ಗೋವಿಂದರಾಜನಗರ ವಿ.ಕ್ಷೇತ್ರ ಕಸಾಪ ಅಧ್ಯಕ್ಷ ಉಮೇಶ್ ಕುಮಾರ್ ಶೆಟ್ಟಿ, ಸಾಂಸ್ಕೃತಿ ಚಿಂತಕರು, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಸಂಗನ ಬಸಪ್ಪ ಬಿರಾದಾರ, ಮಹಾಲಕ್ಷ್ಮಿಲೇಔಟ್ ಕಜಾಪ ಅಧ್ಯಕ್ಷರಾದ ಡಾ. ವಿಜಯಲಕ್ಷ್ಮಿ ಸತ್ಯಮೂರ್ತಿ,ಅಂತಾರಾಷ್ಟ್ರೀಯ ಜಾನಪದ ಗಾಯಕರಾದ ಜೋಗಿಲ ಸಿದ್ದರಾಜು, ಖ್ಯಾತ ಗಾಯಕ ಸಂತವಾಣಿ ಸುಧಾಕರ್, ಹಿರಿಯ ಜಾನಪದ ಗಾಯಕ ಏಕತಾರಿ ರಾಮಯ್ಯ ಬಿಬಿಎಂಪಿ ಮಾಜಿ ಸದಸ್ಯ ಉಮಾಶಂಕರ್, ಶ್ರೀಮತಿ ರೂಪಾದೇವಿ, ಬ್ಲಾಕ್ ಅಧ್ಯಕ್ಷ ಪಿಳ್ಳರಾಜು,ಗೋವಿಂದರಾಜನಗರ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್, ಕಾಂಗ್ರೆಸ್ ಮುಖಂಡರಾದ ಮಾರುತಿ. ಎಂ. ಮೂಡಲಪಾಳ್ಯ ವಾರ್ಡ್ ಅಧ್ಯಕ್ಷರಾದ ಶಶಿಕುಮಾರ್, ಪ್ರಮೀಳಾ ಮತ್ತಿತರರು ಉಪಸ್ಥಿತರಿಲಿದ್ದಾರೆ.
ಜಾನಪದ ಸುಗ್ಗಿ ಸಂಭ್ರಮದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಅಂತರಾಷ್ಟ್ರೀಯ ಗಾಯಕರುಗಳಾದ ಗುರುರಾಜ ಹೊಸಕೋಟೆ, ಶ್ರೀ ಜೋಗಿಲ ಸಿದ್ದರಾಜು, ಶ್ರೀ ಸಂತವಾಣಿ ಸುಧಾಕರ್, ಅರುಣ್ ವೆಚ್ಛಿ, ಕು| ವೈ.ಜಿ. ಉಮಾ, ಏಕತಾರಿ ರಾಮಯ್ಯ ಮತ್ತಿತರರು ಹಾಗೂ ಶ್ರೀರಾಮ ಭಜನಾ ಮಂಡಳಿ ತಂಡದವರಿಂದ ಜಾನಪದ ಗಾಯನ ಹಾಗೂ ವಿದೂಷಿ ನೇತ್ರಾವತಿ ಮಂಜುನಾಥ್ ಸಾರಥ್ಯದ ಶ್ರೀ ಶಿವಲೀಲಾ ಸಂಗೀತ ಮತ್ತು ನೃತ್ಯ ಅಕಾಡೆಮಿ, ಶ್ರೀಮತಿ ಕೋಮಲ ರಾಘವೇಂದ್ರ ಸಾರಥ್ಯದ ನೃತ್ಯಾಭಿನಯ ನೃತ್ಯ ಮತ್ತು ಸಂಗೀತ ಸಂಸ್ಥೆ, ಪ್ರವೀಣ ಸಾರಥ್ಯದ ಪವರ್ ಡ್ಯಾನ್ಸ್ ಅಕಾಡೆಮಿ ಹಾಗೂ ವೀರಮಣಿ ಎಸ್. ಸಾರಥ್ಯದ ಯೂನಿಟಿ ಡ್ಯಾನ್ಸ್ ಕಂಪನಿ ಮಕ್ಕಳಿಂದ ಜಾನಪದ ನೃತ್ಯ ಪ್ರದರ್ಶನ.
ವಿಶ್ವ ಬುಡಕಟ್ಟು ದಿನಾಚರಣೆ ಮತ್ತು ಕನ್ನಡ ಜಾನಪದ ಸುಗ್ಗಿ ಸಂಭ್ರಮದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಿರುವ ವಿಶೇಷ ಸಾಧಕರಿಗೆ ಕನ್ನಡ ಜಾನಪದ ಪರಿಷತ್ ದಶಮಾನೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿರುವ ಶುಭ ಸಂದರ್ಭದಲ್ಲಿ ಪ್ರತಿಷ್ಠಿತ ಮಧುರಚೆನ್ನ ಪ್ರಶಸ್ತಿಯನ್ನು ಕ್ರೀಡಾ ಕ್ಷೇತ್ರದಿಂದ ಅಂತಾರಾಷ್ಟ್ರೀಯ ಅಧೀಟ್ ಅರ್ಜುನ್ ದೇವಯ್ಯ, ಫಿಟ್ನೆಸ್ ಗುರು ವಿಜಯ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ್, ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಟಿ. ನಂಜಪ್ಪ, ಸಂಗೀತ ಕ್ಷೇತ್ರದಿಂದ ಖ್ಯಾತ ಸಂಗೀತ ನಿರ್ದೇಶಕರಾದ ಪುಣ್ಯೇಶ್ ಕುಮಾರ್, ಅಂತಾರಾಷ್ಟ್ರೀಯ ಜಾನಪದ ಗಾಯಕ ಅರುಣ್ ವೆಚ್ಛಿ, ಅಂತಾರಾಷ್ಟ್ರೀಯ ಜಂಬೆ ವಾದಕ – ಜಂಬೆ ಬಾಲು, ಖ್ಯಾತ ಉದಯೋನ್ಮುಖ ಗಾಯಕಿ ಕು. ದತ್ತಶ್ರೀ, ಹಿರಿಯ ಜಾನಪದ ಗಾಯಕ ಹೆಚ್.ಎಸ್. ಜಯರಾಮ್ ರವರಿಗೆ, ಪರಿಸರ ಕ್ಷೇತ್ರದಿಂದ ಹಸಿರು ಸೇನಾ ಪಡೆ ಅಧ್ಯಕ್ಷರಾದ ಡಿ.ಎಸ್. ಕಿರಣ್ ಕುಮಾರ್, ಗ್ರೀನ್ಪಾಥ್ ಸುಕೃಷಿ ಫಾರ್ಮ್ ಅಧ್ಯಕ್ಷರಾದ ಜಯರಾಮ್ ರವರಿಗೆ ವಿಜ್ಞಾನ ಕ್ಷೇತ್ರದಿಂದ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ – ನಾ. ಶ್ರೀಧರ್, ಸೇವಾ ಕ್ಷೇತ್ರದಿಂದ ಚೀಫ್ ಟ್ರಾಫಿಕ್ ವಾರ್ಡನ್ ಸಿ.ವಿ. ಮುರುಳೀಧರ, ನವೋದಯ ವಿಶೇಷ ಮಕ್ಕಳ ಹಗಲು ಪಾಲನಾ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಆಶಾ ಅನಿಲ್ ಕುಮಾರ್, ಚಳುವಳಿ ಕ್ಷೇತ್ರದಿಂದ ಗೋವಿಂದರಾಜನಗರ ವಿ.ಸಭಾ ಕ್ಷೇತ್ರ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಪುರುಷೋತ್ತಮ್,
ದಲಿತ ಸಂಘರ್ಷ ಸೇನೆ ರಾಜ್ಯಾಧ್ಯಕ್ಷ ಎಂ. ಅಂಗರಾಜು, ಸೇವಾ ಕ್ಷೇತ್ರದಿಂದ ಸಮಾಜ ಸೇವಕ ಕೆ. ಕಣ್ಣಯ್ಯ, ಸೌಹಾರ್ದ ಕರ್ನಾಟಕ ರಾಜ್ಯಾಧ್ಯಕ್ಷ ಮಧುಗಿರಿ ಮಂಜುನಾಥ್ ಎನ್.
ವಿಶೇಷ ಅತಿಥಿಗಳಾಗಿ ರಾಮಚಂದ್ರಣ್ಣ, ಹಿರಿಯ ಪತ್ರಕರ್ತರು ಈ ಸಂಜೆ, ಎಲ್. ಲೋಕೇಶ್ ನಿಕಟಪೂರ್ವ ಅಧ್ಯಕ್ಷರು, ಕ.ಸಾ.ಪ, ಮುರುಳಿಧರ್ ರಾಜ್ಯಾಧ್ಯಕ್ಷರು ಅಷ್ಟು ಯುವ ಬ್ರಿಗೇಡ್, ಕೆ.ವಿ. ಸಂದೀಪ್ ಕಾಂಗ್ರೆಸ್ ಮುಖಂಡರು, ಸಂತೋಷ್ ಕುಮಾರ್ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಅಸಂಘಟಿತ ಕಾರ್ಮಿಕರ ವಿಭಾಗ, ಪರುಷೋತ್ತಮ್ ಅಧ್ಯಕ್ಷರು, ಡಾ|| ರಾಜ್ಕುಮಾರ್ ವಾರ್ಡ್, ಸಂದೇಶ್ ಸಂಸ್ಥಾಪಕರು ಚೈತ್ರ ಸಂದೇಶ್ ಅಕಾಡೆಮಿ, ಟಿ.ಡಿ. ಪ್ರಕಾಶ್ ಸಂಪಾದಕರು. ಸಿಂಹಧ್ವನಿ, ಗಜೇಂದ್ರ, ಸಂಪಾದಕರು ಮಹಾಭೋಧಿ ವಾಹಿನಿ, ಪರಿಸರ ವೇಣುಗೋಪಾಲ್ ಸಂಪಾದಕರು ದಿ ನೇಚರ್ ಪತ್ರಿಕೆ, ಶ್ರೀನಿವಾಸ್ ಹೊಸಹಳ್ಳಿ, ಪರಿಸರ ರಾಮು ಸಸಿ ವಿತರಕರು. ಪರುಷೋತ್ತಮ್ ದಾಸಪ್ಪ, ಕರ್ನಾಟಕ ದಲಿತ ಕ್ರಿಯಾ ಸಮಿತಿ ಮತ್ತಿತರರು ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಕನ್ನಡ ಜಾನಪದ ಪರಿಷತ್ ಪದಾಧಿಕಾರಿಗಳು ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ರ. ನರಸಿಂಹಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಕು. ಶ್ವೇತ. ಜಿ, ಪ್ರದಾನ ಕಾರ್ಯದರ್ಶಿ ಲಕ್ಷ್ಮಣ್ ನೆಲಸೊಗಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.